ವಿದೇಶ

ಬ್ರಿಟನ್ ಮುಂದಿನ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್

Nagaraja AB
ಲಂಡನ್ :  ಬ್ರಿಟನಿನ್ನ ಆಡಳಿತರೂಢ ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕಾಗಿ ಇಂದು ನಡೆದ ಚುನಾವಣೆಯಲ್ಲಿ ಬೋರಿಸ್  ಜಾನ್ಸನ್ ಗೆದಿದ್ದು, ಮುಂದಿನ ಪ್ರಧಾನ ಮಂತ್ರಿಯಾಗಲಿದ್ದಾರೆ.
ಕನ್ಸರ್ವೇಟಿವ್ ಪಕ್ಷದ ಸದಸ್ಯರು ಇಂದು ಮತದಾನ ಮಾಡಿದ್ದು, ತಮ್ಮ ಪ್ರತಿಸ್ಪರ್ಧಿ ಜೆರೆಮಿ ಹಂಟ್ ಅವರಿಗಿಂತ ಹೆಚ್ಟಿನ ಮತಗಳ ಅಂತರದಿಂದ ಬೋರಿಸ್  ಜಾನ್ಸನ್  ಗೆಲುವು ಸಾಧಿಸಿದ್ದಾರೆ.
ಪ್ರಧಾನಿ ಥೆರೇಸಾ ಮೇ ನಾಳೆ ಸಂಪ್ರದಾಯಿಕವಾಗಿ  ಬೋರಿಸ್  ಜಾನ್ಸನ್ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ.
55 ವರ್ಷದ ಜಾನ್ಸನ್ ಮಹತ್ವಕಾಂಕ್ಷಿಯಾಗಿದ್ದಾರೆ ಆದರೆ, ಅನಿಯಮಿತ ರಾಜಕಾರಣಿ, ಉನ್ನತ ಅಧಿಕಾರಿಯಾಗಿದ್ದ ಸಂದರ್ಭದಲ್ಲಿಯೇ ರಾಜಕೀಯ ವೃತ್ತಿಜೀವನ ಆರಂಭಿಸಿದ್ದಾರೆ. 
 ಒಪ್ಪಂದದ ಅವಧಿಗೂ ಮುನ್ನವೇ ಬ್ರಿಟನ್ ಯುರೋಪಿಯನ್ ಒಕ್ಕೂಟದಿಂದ ನಿರ್ಗಮಿಸಲಿದೆ ಎಂದು ಜಾನ್ಸನ್ ಹೇಳುತ್ತಿದ್ದಾರೆ. ಆದರೆ, ಒಪ್ಪಂದದಂತೆ ಹೊರಗೆ ಬಾರದಂತೆ ತಡೆಯಲು ಬ್ರಿಟನ್ ಸಂಸತ್ ಪ್ರಯತ್ನಿಸುತ್ತಿದೆ. 
SCROLL FOR NEXT