ವಿದೇಶ

ಪಿಎನ್‌ಬಿ ಹಗರಣ: ನೀರವ್ ಮೋದಿಗೆ ಆಗಸ್ಟ್ 22ರವರೆಗೆ ಜೈಲುವಾಸ ಖಾಯಂ

Raghavendra Adiga
ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರು ವಂಚಿಸಿರುವ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿರುವ ಪ್ರಧಾನ ಆರೋಪಿ  ವಜ್ರ ವ್ಯಾಪಾರಿ ನೀರವ್ ಮೋದಿಗೆ ಆಗಸ್ಟ್ 22ರವರೆಗೆ ಜೈಲು ವಾಸ ಖಾಯಂಗೊಳಿಸಿ ಯುಕೆ ನ್ಯಾಯಾಲಯ ಆದೇಶಿಸಿದೆ.
ವಾಂಡ್ಸ್‌ವರ್ತ್ ಜೈಲಿನಲ್ಲಿರುವ ನೀರವ್ ಮೋದಿಯೊಂದಿಗೆ ವೀಡಿಯೋ ಮೂಲಕ ವಿಚಾರಣೆ ನಡೆಸಿದ  ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮೋದಿ ಜೈಲುವಾಸವನ್ನು ಆಗಸ್ಟ್ 22 ರವರೆಗೆ ವಿಸ್ತರಿಸಿದೆ.
ಸುಮಾರು 2 ಸಾವಿರ ಕೋಟಿ ಅಮೆರಿಕನ್ ಡಾಲರ್ ಪಿಎನ್‌ಬಿ ವಂಚನೆ ಮತ್ತು  ಹಣ ವರ್ಗಾವಣೆ ಕರಣಕ್ಕೆ ಸಂಬಂಧಿಸಿದಂತೆ ಮೋದಿಯನ್ನು (48) ಮಾರ್ಚ್‌ನಲ್ಲಿ ಬಂಧಿಸಿದಾಗಿನಿಂದ  ಆತನನ್ನು ನೈಋತ್ಯ ಲಂಡನ್ನಿನ  ವಾಂಡ್ಸ್‌ವರ್ತ್ ಜೈಲಿನಲ್ಲಿ ಇರಿಸಲಾಗಿದೆ.ಕಳೆದ ತಿಂಗಳ ಪ್ರಾರಂಭದಲ್ಲಿ ಯುಕೆ ನ್ಯಾಯಾಲಯ ಮೋದಿಯ ಜಾಮೀನು ಅರ್ಜಿ ತಿರಸ್ಕರಿಸಿದ ಬಳಿಕ ಅವರು ಮೊದಲ ಬಾರಿಗೆ ವಿಚಾರಣೆಗೆ ಹಾಜರಾಗಿದ್ದರು.
SCROLL FOR NEXT