ವಿದೇಶ

ಪಾಕಿಸ್ತಾನಕ್ಕೆ ಎಫ್ -16 ಫೈಟರ್ ಜೆಟ್‌ ಮಾರಾಟಕ್ಕೆ ಅಮೆರಿಕಾ ಅಸ್ತು

Raghavendra Adiga
ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನಡುವಿನ ಭೇಟಿಯ ಕೆಲ ದಿನಗಳ ನಂತರ ಪಾಕಿಸ್ತಾನದೊಂದಿಗೆ 125 ಮಿಲಿಯನ್ ಡಾಲರ್ ಮೌಲ್ಯದ ಮಿಲಿಟರಿ  ವ್ಯಾಪಾರವನ್ನು ಅನುಮೋದಿಸುವ ನಿರ್ಧಾರವನ್ನು ಪೆಂಟಗಾನ್ ಅಮೆರಿಕಾ ಕಾಂಗ್ರೆಸ್ಸಿಗೆ ಸುಚಿಸಿದೆ.ಇದರಿಂದಾಗಿ ಪಾಕಿಸ್ತಾನದ ಎಫ್ -16 ಯುದ್ಧವಿಮಾನಗಳ ಅಂತಿಮ ಬಳಕೆಯ ಮೇಲ್ವಿಚಾರಣೆ ಯನ್ನು ಅಮೆರಿಕಾ ಸಂಪೂರ್ಣವಾಗಿ ವಹಿಸಿಕೊಳ್ಲಲಿದೆ.
ಟ್ರಂಪ್‌ನಿರ್ದೇಶನದ ಮೇರೆಗೆ 2018 ರ ಜನವರಿಯಿಂದ ಪಾಕಿಸ್ತಾನಕ್ಕೆ ಭದ್ರತಾ ಸಹಾಯವನ್ನು ಸ್ಥಗಿತಗೊಳಿಸಿದ್ದು ಆ ನಿಯಮ ಇನ್ನೂ ಜಾರಿಯಲ್ಲಿದೆ ಆದರೆ ಇತ್ತೀಚಿನ ಈ ನಿರ್ಧಾರ ಪಾಕ್ ನಲ್ಲಿರುವ ಎಫ್ -16 ಯುದ್ಧವಿಮಾನಗಳ 24x7  ಬಳಕೆಯ ಮೇಲ್ವಿಚಾರಣೆಗೆ ಸಹಕಾರಿಯಾಗಲಿದೆ ಎಂದು ಯುಎಸ್ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. . 
"2018 ರ ಜನವರಿಯಲ್ಲಿ ಅಧ್ಯಕ್ಷರು ಘೋಷಿಸಿದ ಭದ್ರತಾ ನೆರವು ನಿರ್ಬಂಧದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಅವರು ಪುನರುಚ್ಚರಿಸಿದಂತೆ, ನಮ್ಮ ಸಂಬಂಧದ ವಿಶಾಲ ವ್ಯಾಪ್ತಿಗೆ ಅನುಗುಣವಾಗಿ  ಕೆಲವು ಭದ್ರತಾ ನೆರವು ಕಾರ್ಯಕ್ರಮಗಳ ಪುನಃಸ್ಥಾಪನೆಯನ್ನು ನಾವು ಪರಿಗಣಿಸಬಹುದು" ಎಂದು ಅಲ್ಲಿನ ರಾಜ್ಯ ಇಲಾಖೆಯ ವಕ್ತಾರರು ಹೇಳಿದರು.
"125 ಮಿಲಿಯನ್ ಯುಎಸ್ ಡಾಲರ್ ವೆಚ್ಚದ ಎಫ್ -16 ವಿಮಾನ ಬಳಕೆಯ ಬಗೆಗೆ ನಿರಂತರವಾಗಿ ಬೆಂಬಲಹಾಗೂ ತಾಂತ್ರಿಕ  ಭದ್ರತಾ ತಂಡದ ನೆರವನ್ನು ಪಾಕಿಸ್ತಾನಕ್ಕೆ ನೀಡಲು  ರಾಜ್ಯ ಇಲಾಖೆ ನಿರ್ಧರಿಸಿದೆ" ಎಂದು ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.ಹೇಳಿಕೆಯ ಪ್ರಕಾರ, ಪಾಕಿಸ್ತಾನ ಅಮೆರಿಖಾವು ಈ ಹಿಂದೆ ನೀಡುತ್ತಿದ್ದ ತಾಂತ್ರಿಕ ಬೆಂಬಲ ಸೇವೆಗಳನ್ನು ಮುಂದುವರಿಸಬೇಕೆಂದು ವಿನಂತಿಸಿದೆ. ಅಮೆರಿಕಾಸರ್ಕಾರ ಮತ್ತು ಗುತ್ತಿಗೆದಾರ ತಾಂತ್ರಿಕ ಮತ್ತು ಲಾಜಿಸ್ಟಿಕ್ಸ್ ಬೆಂಬಲ ಸೇವಾ ಸಂಸ್ಥೆಗಳು ಮತ್ತು ಪಾಕಿಸ್ತಾನ ಪೀಸ್ ಡ್ರೈವ್ ಸುಧಾರಿತ ಯುದ್ಧ ವಿಮಾನಗಳ ಕಾರ್ಯಾಚರಣೆಗಳ ಮೇಲ್ವಿಚಾರಣೆನಡೆಸಲು ತೀರ್ಮಾನಿಸಿದೆ.
ಗಮನಾರ್ಹ ಸಂಗತಿ ಎಂದರೆ ಭಾರತ ನಡೆಸಿದ ಬಾಲಕೋಟ್ ಏರ್ ಸ್ಟ್ರೈಕ್ ನಂತರ ಪಾಕಿಸ್ತಾನ ಭಾರತದ ವಿರುದ್ಧ ಎಫ್ -16 ಯುದ್ಧವಿಮಾನಗಳನ್ನು ಬಳಸಿ ಕದನ ಸಾರಿತ್ತು. ಆಗ ಭಾರತ ವಾಯುಪಡೆ ಆ ವಿಮಾನವನ್ನು ಹೊಡೆದುರುಳಿಸಿತ್ತು.
SCROLL FOR NEXT