ವಿದೇಶ

ಭಾರತೀಯರು, ಇತರ ವಿದೇಶಿಯರನ್ನು ಆತಿಥ್ಯ ಉದ್ಯೋಗದಿಂದ ಬ್ಯಾನ್ ಮಾಡಿದ ಸೌದಿ ಅರೇಬಿಯಾ

Nagaraja AB
ರಿಯಾದ್ :  ಈ ವರ್ಷಾಂತ್ಯದೊಳಗೆ ಆತಿಥ್ಯದ ಉದ್ಯೋಗಗಳನ್ನು ತನ್ನ ದೇಶದ ನಾಗರಿಕರಿಗೆ ಸೀಮಿತಗೊಳಿಸಲು ಚಿಂತಿಸಿರುವ ಸೌದಿ ಅರಬೀಯಾ, ಭಾರತೀಯರು ಸೇರಿದಂತೆ ಇನ್ನಿತರ ವಿದೇಶಿ ನೌಕರರ ನೇಮಕಾತಿಯನ್ನು ನಿರ್ಬಂಧಿಸಿದೆ. 
ಕಾರ್ಮಿಕ ಸಚಿವಾಲಯದ ಹೇಳಿಕೆಯಲ್ಲಿ ಈ ನಿರ್ಧಾರವನ್ನು ತಿಳಿಸಲಾಗಿದೆ. ರೆಸಾರ್ಟ್ಸ್, ಥ್ರಿ ಸ್ಟಾರ್ ,  ಪಂಚತಾರಾ  ಅಥವಾ ಅದಕ್ಕೂ ಮೇಲ್ಪಟ್ಟಿನ ಹೋಟೆಲ್ ಗಳಲ್ಲಿ ಸ್ವಾಗತಕಾರರಿಂದ ಹಿಡಿದು ಆಡಳಿತ ಮಂಡಳಿಯ ಎಲ್ಲಾ ಹುದ್ದೆಗಳಿಗೂ ಸೌದಿ ಅರೇಬಿಯಾ ಪ್ರಜೆಗಳನ್ನೇ ಭರ್ತಿ ಮಾಡಬೇಕು, ಚಾಲಕರು, ಬಾಗಿಲು ಕಾಯುವವನು, ಮತ್ತು ಪೊರ್ಟರ್ಸ್ ಹುದ್ದೆಗಳಿಗೆ ಇದರಿಂದ ವಿನಾಯಿತಿ ನೀಡಿ  ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 
ರಾಷ್ಟ್ರೀಯರಿಗೆ ಸೀಮಿತವಾಗಿರುವ ಇತರ ಉದ್ಯೋಗಗಳಲ್ಲಿ ರೆಸ್ಟೋರೆಂಟ್ ಹೋಸ್ಟ್ ಮತ್ತು ಹೆಲ್ತ್ ಕ್ಲಬ್ ಮೇಲ್ವಿಚಾರಕರು ಸೇರಿದ್ದಾರೆ.ಪ್ರವಾಸೋದ್ಯಮ ಅಭಿವೃದ್ದಿಗೆ ಪ್ರಯತ್ನಿಸುತ್ತಿರುವ ಸೌದಿ ಅರೇಬಿಯಾ, ತನ್ನ ದೇಶದ ನಿರುದ್ಯೋಗ ಪರಿಸ್ಥಿತಿಗೆ ಕಡಿವಾಣ ಹಾಕಲು ಮುಂದಾಗಿದೆ. ಆತಿಥ್ಯ ಕ್ಷೇತ್ರದಲ್ಲಿ ಸೌದಿ ನಾಗರಿಕರಿಗೆ ಎಂಬ ನೀತಿ ಜಾರಿಗೊಳಿಸುವ ಮೂಲಕ ಬ್ಲೂ- ಕಾಲರ್ ಹಾಗೂ ಸೇವಾ ಹುದ್ದೆಗಳಲ್ಲಿ ವಿದೇಶಿಯರ ಪ್ರಾಬಲ್ಯಕ್ಕೆ ಕಡಿವಾಣ ಹಾಕುತ್ತಿದೆ.
ಸೌದಿ ಅರೇಬಿಯಾದಲ್ಲಿ ಉದ್ಯೋಗ ಸೃಷ್ಟಿಸಲು ಇಂತಹ ಕ್ರಮ ಅಗತ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಡಿಸೆಂಬರ್ 29 ರಿಂದ ಈ ನಿರ್ಧಾರ ಅನುಷ್ಠಾನವಾಗುವ ಸಾಧ್ಯತೆ ಇದೆ. 
SCROLL FOR NEXT