ಲಿಲ್ಲೆ: ಫ್ರಾನ್ಸ್ ನಲ್ಲಿ ಕೊಲೆಯಾದ ಭಾರತೀಯ ಮೂಲದ ವ್ಯಕ್ತಿಯೊಬ್ಬನ ಹತ್ಯೆ ಪ್ರಕರಣ ಬೇಧಿಸಲು ಆ ವ್ಯಕ್ತಿಯ ಜೇಬಿನಲ್ಲಿದ್ದ ಸಿಗರೇಟ್ ಲೈಟರ್ ನೆರವಾಗಿದೆ! ಸೋಮವಾರ ಫ್ರೆಂಚ್ ಪೋಲೀಸರು ಹೇಳಿದಂತೆ ಉತ್ತರ ಫ್ರಾನ್ಸ್ ನ ರಸ್ತೆ ಬದಿಯಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು ಇದರ ಹಿನ್ನೆಲೆ ಅರಿಯಲು ಆ ಶವದ ಜೇಬಿನಲ್ಲಿದ್ದ ಸಿಗರೇಟ್ ಲೈಟರ್ ಸಹಾಯ ಮಾಡಿದೆ.
ಹತ್ಯೆ ಪ್ರಕರಣದಲ್ಲಿ ಬೆಲ್ಜಿಯಂ ನಲ್ಲಿದ್ದ ಇನ್ನೋರ್ವ ಭಾರತೀಯ ಮೂಲದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ, ಈ ಕಾರಣಕ್ಕಾಗಿ ಸಿಗರೇಟ್ ಲೈಟರ್ ಸಾಕ್ಷ ಹೆಚ್ಚು ಮಹತ್ವದ್ದೆಂದು ಭಾವಿಸಲಾಗಿದೆ.
ಕಳೆದ ಅಕ್ಟೋಬರ್ ನಲ್ಲಿ ಬೋರ್ಬೌರ್ಗ್ ನಲ್ಲಿ ರಾಷ್ಟ್ರೀಯತೆ, ಲಿಂಗವನ್ನು ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಯಾವುದೇ ದಾಕಲೆಗಳಾಗಲಿ, ಸೆಲ್ ಫೋನ್ ಗಳಾಗಲಿ ಇರದಿದ್ದ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವೊಂದು ಪತ್ತೆಯಾಗಿತ್ತು. ಇದು ಸಹಜ ಸಾವೋ, ಕೊಲೆಯೋ? ಕೊಲೆಯಾದರೆ ಇದರ ಹಿಂದಿನ ಉದ್ದೇಶವೇನು? ಈ ಯಾವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಲಲು ಪೋಲೀಸರು ಪರದಾಡುವಂತಾಯಿತು.
ಲಿಲ್ಲೆ ತನಿಖಾಧಿಕಾರಿಗಳ ತಂಡ ಈ ಪ್ರಕರಣದ ವಿಚಾರಣೆ ನೇತೃತ್ವ ವಹಿಸಿತ್ತು. ಅವರು ಹೇಳಿದಂತೆ ಡಿಎನ್ಎ ಮತ್ತು ಫಿಂಗರ್ ಪ್ರಿಂಟ್ ಗಳಿಂದಲೂ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಆದರೆ ವ್ಯಕ್ತಿಯ ಜೇಬಿನಲ್ಲಿದ್ದ ಸಿಗರೇಟ್ ಲೈತರ್ ನಮ್ಮ ಸಹಾಯಕ್ಕೆ ಬಂದಿತು. ಲೈಟರ್ ಮೇಲೆ "ಕ್ರೋಗ್ ಕೆಫೆ" ಎಂಬ ಸ್ಟಿಕ್ಕರ್ ಹಾಕಲಾಗಿತ್ತು. ನಾವು ಬೆಲ್ಜಿಯಂ ಫೆಡರಲ್ ಪೋಲಿಸ್ ಸಹಾಯ ಪಡೆದು ತನಿಖೆ ನಡೆಸಿದಾಗ ಈ ಲೈಟರ್ ಕಾರಣದಿಂದ ಕೊಲೆ ರಹಸ್ಯ ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ಕಳೆದ ಜೂನ್ ನಿಂದಲೂ ಬೆಲ್ಜಿಯಂ ನಲ್ಲಿ ನೆಲೆಸಿದ್ದ ಭಾರತೀಯ ನಿವಾಸಿ ದರ್ಶನ್ ಸಿಂಗ್ ನನ್ನು ಪೋಲೀಸರು ಹುಡುಕುತ್ತಿದ್ದರು.
ಲೈಟರ್ ಮೇಲಿದ್ದ ಕೆಫೆ ಬೆಲ್ಜಿಯಂ ದೇಶದಲ್ಲಿ ಹೆಸರುವಾಸಿಯಾಗಿರಿವ ಕೆಫೆಯಾಗಿದೆ. ಬೆಲ್ಜಿಯಂ ಹಾಗೂ ನೆದರ್ ಲ್ಯಾಂಡ್ ಗಡಿಯಂಚಿನಲ್ಲಿದ್ದ ಹತ್ಯೆಗೀಡಾಗಿದ್ದ ವ್ಯಕ್ತಿಯ ಮನೆ ಸಮೀಪವೇ ಆ ಕೆಫೆ ಇತ್ತು. ಕಡೆಗೆ ಹತ್ಯೆಯಾದವನ ಗುರುತು ಆತನ ಟೂತ್ ಬ್ರಷ್ ಗಳಿಂದಾಗಿ ಪತ್ತೆಯಾಗಿದೆ. ಬೆಲ್ಜಿಯಂ ನಲ್ಲಿ ನೆಲೆಸಿದ್ದ ಭಾರತೀಯ ನಿವಾಸಿ ದರ್ಶನ್ ಸಿಂಗ್ ಎನ್ನುವಾತನೇ ಕೊಲೆಯಾದ ವ್ಯಕ್ತಿ ಎಂದು ಇದರಿಂದ ಖಚಿತವಾಗಿದೆ.
ಇದೀಗ ಬೆಲ್ಜಿಯಂತನಿಖಾ ದಳ ಮತ್ತೆ ವಿಚಾರಣೆ ಪ್ರಾರಂಭಿಸಿದೆ. ತಾವು ವಶಕ್ಕೆ ಪಡೆದಿರುವ ಶಂಕಿತ ಕೊಲೆಗಾರನನ್ನು ಸಿಂಗ್ ಕೊಲೆ ವಿಚಾರವಾಗಿ ಪ್ರಶ್ನಿಸಿದ ಅಧಿಕಾರಿಗಳಿಗೆ ಕೊಲೆ ರಹಸ್ಯ ತಿಳಿದಿದ್ದರೂ ಕೊಲೆಯ ಉದ್ದೇಶವೇನೆನ್ನುವುದನ್ನು ಮಾದ್ಯಮಗಳೆದುರು ಬಹಿರಂಗಪಡಿಸಲು ಪೋಲೀಸರು ನಿರಾಕರಿಸಿದ್ದಾರೆ. ಫ್ರಾನ್ಸ್ ಅಧಿಕಾರಿಗಳು ಇದೀಗ ಕೊಲೆ ಸಂಬಂಧದ ದಾಖಲೆಗಳನ್ನು ಬೆಲ್ಜಿಯಂ ಪೋಲೀಸರಿಗೆ ಹಸ್ತಾಂತರಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos