ವಿದೇಶ

ನಕಲಿ ಬ್ಯಾಂಕ್ ಖಾತೆ: ಪಾಕ್‌ ಮಾಜಿ ಅಧ್ಯಕ್ಷ್ಯ ಜರ್ದಾರಿ, ಸಹೋದರಿಯ ಬಂಧನ

Lingaraj Badiger
ಇಸ್ಲಾಮಾಬಾದ್‌: ನಕಲಿ ಬ್ಯಾಂಕ್ ಖಾತೆ ಹೊಂದಿದ ಆರೋಪದ ಮೇಲೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಹಾಗೂ ಪಾಕಿಸ್ತಾನ ಪೀಪಲ್‌ ಪಕ್ಷದ ಸಹ ಅಧ್ಯಕ್ಷ ಅಸಿಫ್‌ ಅಲಿ ಜರ್ದಾರಿ ಮತ್ತು ಅವರ ಸಹೋದರಿಯನ್ನು ಸೋಮವಾರ ಬಂಧಿಸಲಾಗಿದೆ.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಭ್ರಷ್ಟಾಚಾರ ನಿಗ್ರಹ ಸಂಸ್ಥೆ ನ್ಯಾಷನಲ್ ಅಕೌಂಟಬಿಲಿಟಿ ಬ್ಯುರೋ(ಎನ್ ಎಬಿ)ದ ಅಧಿಕಾರಿಗಳು ಇಂದು ಜರ್ದಾರಿ ಅವರ ಇಸ್ಲಾಮಾಬಾದ್‌ ನಿವಾಸದ ಮೇಲೆ ದಾಳಿ ನಡೆಸಿ, ಅವರನ್ನು ಬಂಧಿಸಿದೆ.
ನ್ಯಾಯಮೂರ್ತಿ ಅಮೀರ್‌ ಫಾರೂಕ್‌ ನೇತೃತ್ವದ ಇಸ್ಲಾಮಾಬಾದ್‌ ಹೈಕೋರ್ಟ್‌ ಪೀಠ ಪ್ರಕರಣದಲ್ಲಿ ಜರ್ದಾರಿ ಮತ್ತವರ ಕುಟುಂಬದ ಮಧ್ಯಂತರ ಜಾಮೀನು ವಿಸ್ತರಣೆ ಅರ್ಜಿ ತಿರಸ್ಕರಿಸಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಜರ್ದಾರಿ ಹಾಗೂ ಅವರ ಸಹೋದರಿ ಫರ್ಯಾಲ್ ಅವರು ನಕಲಿ ಬ್ಯಾಂಕ್‌ ಖಾತೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಮಾಡಿರುವ ಆರೋಪ ಎದುರಿಸುತ್ತಿದ್ದು, ನಿನ್ನೆಯಷ್ಟೇ ಎನ್ ಎಬಿ ಆರೋಪಿಗಳ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಿತ್ತು.
SCROLL FOR NEXT