ವಿದೇಶ

ಎಸ್ ಸಿಒ ಶೃಂಗಸಭೆ: ಪ್ರಧಾನಿ ಮೋದಿ-ಆಫ್ಘನ್ ಅಧ್ಯಕ್ಷ ಘನಿ ಮಹತ್ವದ ಭೇಟಿ

Srinivasamurthy VN
ಬಿಶ್ಕೆಕ್: ಕಿರ್ಗಿಸ್ತಾನದ ಬಿಶ್ಕೆಕ್ ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆ (ಎಸ್ ಸಿಒ)ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಅವರು ಪರಸ್ಪರ ಭೇಟಿಯಾಗಿದ್ದು, ಮಹತ್ವದ ಸಭೆ ನಡೆಸಿದ್ದಾರೆ.
ಈ ಕುರಿತಂತೆ ಕೇಂದ್ರ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಅವರು ಟ್ವೀಟ್ ಮಾಡಿದ್ದು, ಪ್ರಧಾನಿ ಮೋದಿ ಮತ್ತು ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಅವರು ಪರಸ್ಪರ ಆಫ್ಘನ್ ಹಾಲಿ ಪರಿಸ್ಥಿತಿ ಮತ್ತು ಪರಸ್ಪರ ಸಹಕಾರ ಯೋಜನೆಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಅಲ್ಲದೆ ಆಫ್ಘಾನಿಸ್ತಾನದಲ್ಲಿನ ಅಭಿವೃದ್ದಿಯ ಭಾರತದ ಪಾತ್ರ ಮತ್ತು ಉಭಯ ದೇಶಗಳ ನಡುವಿನ ಸಹಾಕಾರ ಒಪ್ಪಂದಗಳ ಕುರಿತಂತೆ ಚರ್ಚೆ ನಡೆಸಲಾಗಿದೆ. ಪ್ರಮುಖವಾಗಿ ಸ್ಥಳೀಯ ಮೂಲಭೂತವಾದಿಗಳ ಸಂಘರ್ಷದಿಂದ ಆಫ್ಘಾನಿಸ್ತಾನ ನಲುಗುತ್ತಿದ್ದು, ಶಾಂತಿ ಸ್ಥಾಪನೆ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. 
ನಿನ್ನೆಯಷ್ಟೇ ಪ್ರಧಾನಿ ಮೋದಿ ಕಿರ್ಗಿಸ್ತಾನಕ್ಕೆ ತೆರಳಿದ್ದು, ಎಸ್ ಸಿಎ ಶೃಂಗಸಭೆಯಲ್ಲಿ ಹಲವು ಪ್ರಮುಖ ಮುಖಂಡರನ್ನು ಭೇಟಿ ಮಾಡಲಿದ್ದಾರೆ. 
SCROLL FOR NEXT