ಜು.25 ವರೆಗೆ ನೀರವ್ ಮೋದಿಗೆ ಜೈಲೇ ಗತಿ!
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಉದ್ಯಮಿ ನೀರವ್ ಮೋದಿಗೆ ಜುಲೈ 25 ವರೆಗೆ ಜೈಲು ವಾಸವೇ ಗತಿಯಾಗಿದೆ.
ಬ್ರಿಟನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಉದ್ಯಮಿ ನೀರವ್ ಮೋದಿಗೆ ಜುಲೈ 25 ವರೆಗೆ ಜೈಲು ವಾಸವೇ ಗತಿಯಾಗಿದೆ.
ಬ್ರಿಟನ್ ನ ಕೋರ್ಟ್ ನೀರವ್ ಮೋದಿ ಬಂಧನದ ಅವಧಿಯನ್ನು ಜು.25 ವರೆಗೆ ವಿಸ್ತರಿಸಿದೆ. ಭಾರತಕ್ಕೆ ಗಡಿಪಾರು ಮಾಡುವುದರ ವಿರುದ್ಧ ನೀರವ್ ಮೋದಿ ಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದು, ಕಳೆದ 3 ತಿಂಗಳಿನಿಂದ ಸೌತ್ ವೆಸ್ಟ್ ಲಂಡನ್ ನಲ್ಲಿರುವ ವಾಂಡ್ಸ್ ವರ್ತ್ ಕಾರಾಗೃಹದಲ್ಲಿದ್ದಾನೆ.
ನೀರವ್ ಮೋದಿಯ ಜಾಮೀನು ಅರ್ಜಿಯನ್ನು ಜೂ.12 ರಂದೂ ಬ್ರಿಟನ್ ಹೈಕೋರ್ಟ್ ತಿರಸ್ಕರಿಸಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.