ವಿದೇಶ

ಜಿ20 ಶೃಂಗಸಭೆ: ಮೋದಿ, ಟ್ರಂಪ್, ಶಿಂಜೋ ಅಬೆ ತ್ರಿಪಕ್ಷೀಯ ಸಭೆ, ಹಲವು ಒಪ್ಪಂದಗಳ ಚರ್ಚೆ

Srinivasamurthy VN
ಒಸಾಕಾ: ಜಪಾನ್ ನ ಒಸಾಕಾದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆ ನಡುವೆಯೇ ಭಾರತ, ಅಮೆರಿಕ ಮತ್ತು ಜಪಾನ್ ದೇಶಗಳ ನಡುವಿನ ತ್ರಿಪಕ್ಷೀಯ ಸಭೆ ಕೂಡ ನಡೆದಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ಈ ಬಹುಮುಖ್ಯ ತ್ರಿಪಕ್ಷೀಯಸಭೆಯಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಟ್ರಂಪ್ ಹಾಗೂ ಶಿಂಜೋ ಅಬೆ ಪ್ರಧಾನಿ ನರೇಂದ್ರ ಮೋದಿ ಅವರಗೆ ಶುಭ ಕೋರಿದ್ದು, ಲೋಕಸಭಾ ಚುನಾವಣೆಯಲ್ಲಿನ ಮೋದಿ ಗೆಲುವನ್ನು ಶ್ಲಾಘಿಸಿದ್ದಾರೆ.
ಈ ವೇಳೆ ಮಾತನಾಡಿದ ಅಮೆರಿಕ ಅಧ್ಯಕ್ಷ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ನಿಜಕ್ಕೂ ಈ ಇಬ್ಬರು ನಾಯಕರು ತಮ್ಮ ತಮ್ಮ ದೇಶಕ್ಕೆ ಉತ್ತಮ ಕೆಲಸ ಮಾಡುತ್ತಿದ್ದು, ಭವಿಷ್ಯದಲ್ಲಿ ಇನ್ನೂ ಉತ್ತಮ ಕೆಲಸಗಳನ್ನು ನಿರೀಕ್ಷಿಸುತ್ತಿದ್ದೇನೆ. ಇದಕ್ಕಾಗಿ ಅಮೆರಿಕದ ಸಹಕಾರವೂ ಇದ್ದೇ ಇರುತ್ತದೆ ಎಂದು ಟ್ರಂಪ್ ಭರವಸೆ ನೀಡಿದ್ದಾರೆ.
ಅಂತೆಯೇ ತ್ರಿಪಕ್ಷೀಯ ಬಾಂಧವ್ಯದ ಅಗತ್ಯದ ಬಗ್ಗೆ ಪ್ರಧಾನಿ ಮೋದಿ ವಿವರಿಸಿದರು. ಬಳಿಕ ಟ್ರಂಪ್ ಜೊತೆಗೆ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ, ಪ್ರಧಾನಿ ಮೋದಿ ಅವರು "ಭಾರತದ ಮಹತ್ವವನ್ನು" ಒತ್ತಿಹೇಳಿದ್ದಾರೆ. 
ಗುರುವಾರ ಜಪಾನ್‌ಗೆ ಆಗಮಿಸುವ ಮುನ್ನ ಟ್ವೀಟ್ ಮಾಡಿದ್ದ ಅಮೇರಿಕಾ ಅಧ್ಯಕ್ಷ ಟ್ರಂಪ್‌, 'ಅಮೆರಿಕದ ಉತ್ಪನ್ನಗಳ ಮೇಲೆ ಕೆಲವು ವರ್ಷಗಳಿಂದ ಅತ್ಯಂತ ದುಬಾರಿ ತೆರಿಗೆ ವಿಧಿಸುತ್ತಿರುವ ಭಾರತದ ನೀತಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತುಕತೆ ನಡೆಸಲಿದ್ದೇನೆ. ಇತ್ತೀಚೆಗೆ ಭಾರತ ಮತ್ತೊಮ್ಮೆ ತೆರಿಗೆ ಏರಿಸಿದೆ. ಈ ಏರಿಕೆಯನ್ನು ಹಿಂತೆಗೆದುಕೊಳ್ಳಬೇಕು' ಎಂದು ಆಗ್ರಹಿಸಿದ್ದರು. 
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ ಜೈ ಕಾರ ಕೂಗಿದರು. JAI (ಜಪಾನ್ ಅಮೆರಿಕ ಭಾರತ) 'ಉತ್ತಮ ಸ್ನೇಹಿತರಾಗಿರುವ ನಾವು ಮಿಲಿಟರಿ ಮತ್ತು ಇತರ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದಾಗಿ ಟ್ರಂಪ್ ಹೇಳಿದರು. ಇಂಡೋ ಫೆಸಿಫಿಕ್ ಪ್ರದೇಶದಲ್ಲಿ ಸ್ಥಿರತೆ ಮತ್ತು ಪ್ರಗತಿ ನಮ್ಮ ಪ್ರಮುಖ ಆದ್ಯತೆ' ಎಂಬುದನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದರು. ಅಲ್ಲದೆ ಉತ್ತಮ ಸ್ನೇಹಿತರಾಗಿರುವ ನಾವು ಮಿಲಿಟರಿ ಮತ್ತು ಇತರ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದಾಗಿ ಟ್ರಂಪ್ ಹೇಳಿದರು. ಇಂಡೋ ಫೆಸಿಫಿಕ್ ಪ್ರದೇಶದಲ್ಲಿ ಸ್ಥಿರತೆ ಮತ್ತು ಪ್ರಗತಿ ನಮ್ಮ ಪ್ರಮುಖ ಆದ್ಯತೆ ಎಂಬುದನ್ನು ಪ್ರಧಾನಿ ಮೋದಿ ಹೇಳಿದರು. 
SCROLL FOR NEXT