ಸುಷ್ಮಾ ಸ್ವರಾಜ್ 
ವಿದೇಶ

ಓಐಸಿ ಸಭೆಯಲ್ಲಿ ಗೌರವ ಅತಿಥಿಯಾಗಿ ಸುಷ್ಮಾ ಸ್ವರಾಜ್ ಭಾಗಿ : ಪಾಕಿಸ್ತಾನ ಬಹಿಷ್ಕಾರ

ಇಸ್ಲಾಮಿಕ್ ಸಹಕಾರ ಸಂಘಟನೆ ಆಯೋಜಿಸಿರುವ ಎರಡು ದಿನಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಇದೇ ಮೊದಲ ಬಾರಿಗೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದಾರೆ

ಅಬುದಾಬಿ: ಇಸ್ಲಾಮಿಕ್ ಸಹಕಾರ ಸಂಘಟನೆ ಆಯೋಜಿಸಿರುವ ಎರಡು ದಿನಗಳ  ವಿದೇಶಾಂಗ ಸಚಿವರ ಸಭೆಯಲ್ಲಿ ಇದೇ ಮೊದಲ ಬಾರಿಗೆ  ಭಾರತದ ವಿದೇಶಾಂಗ ಸಚಿವೆ  ಸುಷ್ಮಾ ಸ್ವರಾಜ್  ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಆದರೆ, ಭಾರತದ ಸಚಿವರ ಆಹ್ವಾನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ತಾನ ಸಭೆಯನ್ನು ಬಹಿಷ್ಕರಿಸಿದೆ.

ಪಾಕಿಸ್ತಾನದ  ತೀವ್ರ ಆಕ್ಷೇಪದ ಹೊರತಾಗಿಯೂ 57 ಸದಸ್ಯರನ್ನೊಳಗೊಂಡ ಇಸ್ಲಾಮಿಕ್ ಸಹಕಾರ ಸಂಘಟನೆ  ಗೌರವ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸುಷ್ಮಾ ಸ್ವರಾಜ್, ಭಯೋತ್ಪಾದನೆ  ವಿರುದ್ಧದ ಹೋರಾಟ ಯಾವುದೇ ಧರ್ಮದ ವಿರುದ್ಧದ ಹೋರಾಟ ಅಲ್ಲ,  ಇದು ಸಂಸ್ಕೃತಿ ಅಥವಾ ನಾಗರಿಕತೆ ನಡುವಿನ ಹೋರಾಟವಲ್ಲ, ಇದು ಮಾನವೀಯ  ಮೌಲ್ಯಗಳು ಹಾಗೂ ಅಮಾನವೀಯ ಶಕ್ತಿಗಳ ನಡುವಿನ ಹೋರಾಟವಾಗಿದೆ ಎಂದರು.

ವಿಶ್ವದಲ್ಲಿನ ಎಲ್ಲ ರಾಷ್ಟ್ರಗಳು ಶಾಂತಿ, ಸೌಹಾರ್ದತೆ ಬಯಸುತ್ತವೆ. ಪ್ರತಿಯೊಂದು ಧರ್ಮ ಶಾಂತಿಯನ್ನು ಬೋಧಿಸುತ್ತವೆ.  ಇಸ್ಲಾಂ ಧರ್ಮದಲ್ಲೂ ಇದನ್ನೇ ಹೇಳಲಾಗಿದೆ. ನಾವುಗಳ ಅದರ ಪರವಾಗಿ ನಿಂತುಕೊಳ್ಳಬೇಕಾಗಿದೆ ಎಂದು ಹೇಳಿದ ಸುಷ್ಮಾ ಸ್ವರಾಜ್ ,  ಖುಗ್ವೇದ ಶ್ಲೋಕವೊಂದನ್ನು ಹೇಳಿದರು. ಅಂದರೆ ದೇವರೊಬ್ಬನೇ, ಆದರೆ, ಬಲ್ಲವರು ಅವನನ್ನು ಹಲವು ವಿಧದಲ್ಲಿ ನೋಡುತ್ತಾರೆ ಎಂದು ಹೇಳಿದರು.

 ಪುಲ್ವಾಮಾದಲ್ಲಿ ಫೆಬ್ರವರಿ 14 ರಂದು 40 ಸೈನಿಕರ ಮೇಲೆ  ಪಾಕಿಸ್ತಾನದ ಮೂಲದ ಜೈಷ್ - ಇ- ಮೊಹಮ್ಮದ್ ಉಗ್ರ ಸಂಘಟನೆ ದಾಳಿ ನಂತರ ಪಾಕಿಸ್ತಾನ ಮತ್ತು ಭಾರತ ನಡುವಣ ಪರಿಸ್ಥಿತಿ ಬಿಗಡಾಯಿಸಿದೆ ಎಂದು ತಿಳಿಸಿದರು. ನಾವು ಮಾನವೀಯತೆಯನ್ನು ರಕ್ಷಿಸಬೇಕಾಗಿದೆ. ಭಯೋತ್ಪಾದನೆ ವಿರುದ್ಧ ಎಲ್ಲರೂ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.

ಇಸ್ಲಾಮಿಕ್ ಸಹಕಾ ಸಂಘಟನೆ ಸದಸ್ಯ ರಾಷ್ಟ್ರವಾಗಿರುವ ಪಾಕಿಸ್ತಾನ ಭಾರತದ ಸುಷ್ಮಾ ಸ್ವರಾಜ್ ಅವರಿಗೆ ಆಹ್ವಾನ ನೀಡದಂತೆ ತಡೆಯಲು ಸಾಕಷ್ಟು ಪ್ರಯತ್ನಿಸಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಸಭೆಗೆ ಗೈರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತುಳು ಭಾಷೆಗೆ ಸಿಕ್ತು ಅಧಿಕೃತ ಸ್ಥಾನಮಾನ: ಕರ್ನಾಟಕದ 2ನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ, ಕರಾವಳಿಗೆ ಹೊಸ ಟೂರಿಸಂ ನೀತಿ!

‘ಪ್ರಜಾಪ್ರಭುತ್ವದ ಕರಾಳ ದಿನ’, 'ತಲೆ ಬಾಗಲ್ಲ, ಯಾರಿಗೂ ಶರಣಾಗಲ್ಲ'; ಮಮತಾ ಬ್ಯಾನರ್ಜಿ ಕೆಂಡಾಮಂಡಲ

ಪ್ರಧಾನಿ ಮೋದಿಗೆ UAE ಅಧ್ಯಕ್ಷ ನಹ್ಯಾನ್ ದೂರವಾಣಿ ಕರೆ: ಪಶ್ಚಿಮ ಏಷ್ಯಾದಲ್ಲಿನ ಬೆಳವಣಿಗೆ, ಕಾರ್ಯತಂತ್ರದ ಪಾಲುದಾರಿಕೆ ಕುರಿತು ಚರ್ಚೆ!

ದೀದಿ ಬಣಕ್ಕೆ ಫುಟ್‌ಬಾಲ್, ಬಂಡಾಯಗಾರರಿಗೆ ಲಕೋಟೆ: ಟಿಎಂಸಿ ಚಿಹ್ನೆ ಫ್ರೀಜ್ ಬೆನ್ನಲ್ಲೇ ಚುನಾವಣಾ ಆಯೋಗದಿಂದ ಮಹತ್ವದ ಆದೇಶ!

ಬಾಲಿವುಡ್ ನಟಿ ಕತ್ರೀನಾ ಕೈಫ್ ಬಾಡಿ ಶೇಮಿಂಗ್: ಟ್ರೋಲ್ ಮಾಡುವವರ ವಿರುದ್ಧ ನಟಿ ರಮ್ಯಾ ಕಿಡಿ!