ಸಂಗ್ರಹ ಚಿತ್ರ 
ವಿದೇಶ

ಬಿನ್ ಲಾಡೆನ್​ ಪುತ್ರನ ಪೌರತ್ವ ರದ್ದುಗೊಳಿಸಿದ ಸೌದಿ ಸರ್ಕಾರ

ಅಲ್​-ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥಒಸಾಮ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್​ ಲಾಡೆನ್ ಸೌದಿ ಪೌರತ್ವವನ್ನು ಸೌದಿ ಅರೇಬಿಯಾ ಸರ್ಕಾರ ರದ್ದುಗೊಳಿಸಿದೆ.

ಅಬುದಾಬಿ: ಅಲ್​-ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥಒಸಾಮ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್​ ಲಾಡೆನ್ ಸೌದಿ ಪೌರತ್ವವನ್ನು ಸೌದಿ ಅರೇಬಿಯಾ ಸರ್ಕಾರ ರದ್ದುಗೊಳಿಸಿದೆ.
ಭಯೋತ್ಪಾದನೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಸೌದಿ ಅರೇಬಿಯಾ ಮತ್ತೊಂದು ಖಡಕ್​ ನಿರ್ಧಾರ ತೆಗೆದುಕೊಂಡಿದ್ದು, ಅತ್ತ, ಅಮೇರಿಕಾ ಸರ್ಕಾರ ಲಾಡೆನ್ ಪುತ್ರ ಹಮ್ಜಾ ಬಿನ್​ ಲಾಡೆನ್​ ತಲೆಗೆ 1 ಮಿಲಿಯನ್ ಡಾಲರ್ ಬಹುಮಾನ ಘೋಷಣೆ ಮಾಡಿದ ಬೆನ್ನಲ್ಲೇ ಇತ್ತ ಸೌದಿ ಸರ್ಕಾರ ಕೂಡ ಹಮ್ಜಾ ಬಿನ್​ ಲಾಡೆನ್ ಸೌದಿ ಪೌರತ್ವವನ್ನು ರದ್ದುಗೊಳಿಸಿದೆ.
ಈ ಹಿಂದೆ, ಭರ್ಜರಿ ಸರ್ಜಿಕಲ್​ ಸ್ಟ್ರೈಕ್​ ಮೂಲಕ ಅಮೆರಿತ ಕಾರ್ಯಾಚರಣೆ ನಡೆಸಿ, ಅಲ್​ ಖೈದಾ ಉಗ್ರ ಒಸಾಮಾ ಬಿನ್​​ ಲಾಡೆನ್ ​ನನ್ನು ಕೊಂದು ಹಾಕಿತ್ತು. ಇದೀಗ ಅವನ ಪುತ್ರ ಹಮ್ಜಾಬಿನ್​ ಲಾಡೆನ್​​​ ಮೇಲೂ ಅಮೆರಿಕ ಮುಗಿಬಿದ್ದಿದೆ. ಶತಾಯಗತಾಯ ಲಾಡೆನ್​ ಸಂತತಿಯನ್ನು ನಿರ್ನಾಮಗೊಳಿಸುವತ್ತ ಮನಸ್ಸು ಮಾಡಿರುವ ಅಮೆರಿಕಾ, ಹಮ್ಜಾಬಿನ್ ಲಾಡೆನ್ ​​ನನ್ನು ಜೀವಂತವಾಗಿ ಹಿಡಿದುಕೊಟ್ಟವರಿಗೆ 10 ಲಕ್ಷ ಡಾಲರ್​​​ ಬಹುಮಾನ ನೀಡುವುದಾಗಿ ಘೋಷಿಸಿದೆ. 
ಹಮ್ಜಾ ಎಲ್ಲಿದ್ದಾನೆ ಎಂಬ ಬಗ್ಗೆ ಕೆಲ ವರ್ಷಗಳಿಂದ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇವೆ. ಆತ ಪಾಕಿಸ್ತಾನದಲ್ಲಿದ್ದಾನೆ ಎಂದು ಕೆಲ ವರದಿಗಳು ಹೇಳಿದರೆ, ಇನ್ನೂ ಕೆಲ ವರದಿಗಳು ಅಫ್ಘಾನಿಸ್ತಾನ, ಸಿರಿಯಾದಲ್ಲಿದ್ದಾನೆ ಎನ್ನುತ್ತವೆ. ಆತ, ಇರಾನ್​ ನಲ್ಲಿ ಗೃಹಬಂಧನದಲ್ಲಿದ್ದಾನೆ ಎನ್ನುವ ಮಾತುಗಳೂ ಇವೆ. ಹಾಗಾಗಿ, ಹಮ್ಜಾ ಇರುವಿಕೆ ಬಗ್ಗೆ ಸುಳಿವು ನೀಡುವಂತೆ ಅಮೆರಿಕ ಕೋರಿದೆ. 'ಹಮ್ಜಾ ಬಿನ್​ ಲಾಡೆನ್​ನ ಮಗ. ಆತ ಈಗ ಅಲ್​ ಖೈದಾದ ನಾಯಕನಾಗಿ ಬೆಳೆಯುತ್ತಿದ್ದಾನೆ. ಆತ ಯಾವುದೇ ರಾಷ್ಟ್ರದಲ್ಲಿರಲಿ. ಆತನ ಬಗ್ಗೆ ಮಾಹಿತಿ ನೀಡಿದೆ ನಾವು ಬಹುಮಾನ ನೀಡುತ್ತೇವೆ,' ಎಂದು ಅಮೆರಿಕ ವಿದೇಶಾಂಗ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು.
ಈ ಹಿನ್ನೆಲೆಯಲ್ಲಿ, ಇದೀಗ ಸೌದಿ ಅರೇಬಿಯಾ ತಕ್ಷಣದಿಂದ ಜಾರಿಗೆ ಬರುವಂತೆ ಹಮ್ಜಾ ಬಿನ್​ ಲಾಡೆನ್ ನ ಪೌರತ್ವವನ್ನು ರದ್ದುಗೊಳಿಸಿದೆ. ಹಮ್ಜಾ ಬಿನ್​ ಲಾಡೆನ್​ ಪ್ರಸ್ತುತ ಸೌದಿ ಅರೇಬಿಯಾದಲ್ಲಿ ಅಡಗಿದ್ದಾನೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

ದಾವಣಗೆರೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ಚೂರಿ: ಸುರ್ಜೇವಾಲ ಕೈಸೇರಿದ ರಿಪೋರ್ಟ್; MLC ಅಬ್ದುಲ್ ಜಬ್ಬಾರ್ ರಾಜಿನಾಮೆ!

ಮಧ್ಯಸ್ಥಿಕೆ ಯಾರೇ ವಹಿಸಲಿ ಅದರಿಂದ ಭಾರತಕ್ಕೇ ಲಾಭ! US ಜೊತೆ ಅಂಥಹ ಸಂಬಂಧ ಬೆಳಸಲು ಪಾಕ್ ಗೆ ಮಾತ್ರ ಸಾಧ್ಯ, ಬೇರಾರಿಗೂ ಅಲ್ಲ: ತರೂರ್ ವ್ಯಂಗ್ಯ

ಒಂದು ಸಲ ಅಧಿಕಾರ ಕೊಟ್ಟು ನೋಡಿ, ರಾಜ್ಯಕ್ಕೆ ಹಿಡಿದಿರೋ ಗ್ರಹಣ ಬಿಡಿಸ್ತೀನಿ: ಕುಮಾರಸ್ವಾಮಿ

ಹುಬ್ಬಳ್ಳಿ ಆಯ್ತು ಈಗ ಕೊಪ್ಪಳದಲ್ಲೂ Love Jihad: ಮುಸ್ತಫಾ ಮೊಬೈಲ್‌ನಲ್ಲಿ Hindu ಯುವತಿಯರ ಅಶ್ಲೀಲ ವಿಡಿಯೋಗಳು ಪತ್ತೆ!

SCROLL FOR NEXT