ಯುನೈಟೆಡ್ ನೇಷನ್ಸ್: ಅಲ್ ಖೈದಾ ಮಾಜಿ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ನನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಕಪ್ಪು ಪಟ್ಟಿಗೆ ಸೇರಿಸಿದೆ. ಹಮ್ಜಾ ಅಲ್ ಖೈದಾ ಉಗ್ರ ಸಂಘಟನೆಯ ಈಗಿನ ಮುಖ್ಯಸ್ಥ ಐಮಾನ್ ಅಲ್ ಜವಾಹರಿ ಅವರ ನಿಕಟಪೂರ್ವ ಉತ್ತರಾಧಿಕಾರಿ ಎಂದು ಬಿಂಬಿಸಲಾಗಿದೆ.
ಭದ್ರತಾ ಮಂಡಳಿಯು 1267 ಇಸಿಸ್ ಹಾಗೂ ಅಲ್ ಖೈದಾ ಉಗ್ರ ಸಂಘಟನೆ ಸದಸ್ಯರನ್ನು ನಿರ್ಬಂಧಿಸಿದ್ದು ಲಾಡನ್ ಪುತ್ರ ಹಮ್ಜಾ ಬಿನ್ ಲಾಡೆನ್ ನನ್ನು ಸಹ ಕಪ್ಪು ಪಟ್ಟಿಗೆ ಸೇರಿಸಿದೆ. ಇದಕ್ಕೆ ಮುನ್ನ ಅಮೆರಿಕಾ ಹಮ್ಜಾ ಬಿನ್ ಲಾಡೆನ್ ಕುರಿತು ಸುಳಿವು ನೀಡಿದವರಿಗೆ ಸುಮಾರು ಒಂದು ಬಿಲಿಯನ್ ಡಾಲರ್ ಬಹುಮಾನವನ್ನು ಘೋಷಿಸಿತ್ತು.
ಇದಕ್ಕೆ ಪೂರಕವೆನ್ನುವಂತೆ ಸೌದಿ ಸರ್ಕಾರ ಕೂಡ ಹಮ್ಜಾ ಬಿನ್ ಲಾಡೆನ್ ಸೌದಿ ಪೌರತ್ವವನ್ನು ರದ್ದುಗೊಳಿಸಿದೆ.
ಅಲ್-ಜವಾಹರಿ ಸೌದಿ ಅರೇಬಿಯಾ ಮೂಲದ ಹಮ್ಜಾ ಬಿನ್ ಲಾಡೆನ್ ಲ್ ಖೈದಾದ ಅಧಿಕೃತ ಸದಸ್ಯನೆಂದು ಘೋಷಿಸಿದ್ದಾನೆ. ಭಯೋತ್ಪಾದಕ ದಾಳಿಯನ್ನು ನಡೆಸಲು ಅಲ್ ಖೈದಾದ ಅನುಯಾಯಿಗಳಿಗೆ ಹಮ್ಜಾ ಕರೆ ನೀಡಿದ್ದಾನೆ.. ಅಲ್-ಜಾವಾಹಿರಿಯ ಅತ್ಯಂತ ಸಂಭವನೀಯ ಉತ್ತರಾಧಿಕಾರಿಯಾಗಿರುವ ಈತನನ್ನು ಕಪ್ಪುಪಟ್ಟಿಗೆ ಸೇರಿಸುತ್ತಿದ್ದೇವೆ ಎಂದು 15-ಸದಸ್ಯರ ವಿಶ್ವಸಂಸ್ಥೆ ಭದ್ರತಾ ಮಂಡಳಿ ಹೇಳಿದೆ.
ಉಗ್ರವಾದವನ್ನು ಮಟ್ಟಹಾಕುವ ನಿಟ್ಟಿನಲ್ಲಿ ಬಿನ್ ಲಾಡೆನ್ ಪುತ್ರನನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದ್ದು ಇದರಿಂದ ಇನು ಮುಂದೆ ಆ ಸಂಘಟನೆಗೆ ಇತರೆಡೆಗಳಿಂದ ಹರಿದು ಬರುವ ಹಣಕಾಸು ನೆರವು, ಇತರೆ ಸೌಲಭ್ಯಗಳು ನಿಂತು ಹೋಗಲಿದೆ. ಅಲ್ಲದೆ ಹಮ್ಜಾ ಯಾವುದೇ ರಾಷ್ಟ್ರಕ್ಕೆ ಪ್ರವಾಸ ಕೈಗೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಅಲ್ಲದೆ ಉಗ್ರ ಸಂಘಟನೆಗೆ ಇದುವರೆಗೆ ಸರಬರಾಜಾಗುತ್ತಿದ್ದ ಶಸ್ತ್ರಾಸ್ತ್ರ ಸರಬರಾಜು ಸಹ ಇನ್ನು ನಿಂತುಹೋಗಲಿದೆ, ಅಥವಾ ಕಾನೂನು ಬಾಹಿರವೆನಿಸಲಿದೆ ಎಂದು ಪಿಟಿಐ ವರದಿ ಮಾಡಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos