ಸಂಗ್ರಹ ಚಿತ್ರ 
ವಿದೇಶ

ಭಾರತೀಯ ವಾಯುಸೇನೆ ದಾಳಿಯಿಂದ ಜೈಶ್ ಉಗ್ರರ ಹತ್ಯೆ; ಸತ್ಯ ಒಪ್ಪಿಕೊಂಡ ಮಸೂದ್ ಅಜರ್ ಸಹೋದರ

ಇತ್ತ ಭಾರತದಲ್ಲಿ ವಿಪಕ್ಷಗಳು ಭಾರತೀಯ ವಾಯುಸೇನೆಯ ದಾಳಿ ಕುರಿತು ಶಂಕೆ ವ್ಯಕ್ತಪಡಿಸುತ್ತಿರುವ ಹೊತ್ತಿನಲ್ಲೇ ಅತ್ತ ಪಾಕಿಸ್ತಾನದಲ್ಲಿ ಭಾರತೀಯ ವಾಯುಸೇನೆ ದಾಳಿಯಿಂದ ಜೈಶ್ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಸ್ವತಃ ಮಸೂದ್ ಅಜರ್ ಸಹೋದರ ಮೌಲಾನ ಅಮ್ಮರ್ ಒಪ್ಪಿಕೊಂಡಿದ್ದಾನೆ.

ನವದೆಹಲಿ: ಇತ್ತ ಭಾರತದಲ್ಲಿ ವಿಪಕ್ಷಗಳು ಭಾರತೀಯ ವಾಯುಸೇನೆಯ ದಾಳಿ ಕುರಿತು ಶಂಕೆ ವ್ಯಕ್ತಪಡಿಸುತ್ತಿರುವ ಹೊತ್ತಿನಲ್ಲೇ ಅತ್ತ ಪಾಕಿಸ್ತಾನದಲ್ಲಿ ಭಾರತೀಯ ವಾಯುಸೇನೆ ದಾಳಿಯಿಂದ ಜೈಶ್ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಸ್ವತಃ ಮಸೂದ್ ಅಜರ್ ಸಹೋದರ ಮೌಲಾನ ಅಮ್ಮರ್ ಒಪ್ಪಿಕೊಂಡಿದ್ದಾನೆ.
ಈ ಬಗ್ಗೆ ಮೌಲಾನ ಅಮ್ಮರ್ ಮಾತನಾಡಿರುವ ಆಡಿಯೋ ಕ್ಲಿಪ್ ಒಂದು ಬಿಡುಗಡೆಯಾಗಿದ್ದು, ಆಡಿಯೋದಲ್ಲಿ ಬಾಲ್​​ಕೋಟ್ ನಲ್ಲಿರುವ ಉಗ್ರ ಶಿಬಿರಗಳನ್ನು ಭಾರತ ನಾಶ ಮಾಡಿದ್ದು ಹೌದು ಎಂದು ಹೇಳಿದ್ದಾನೆ. ಆ ಮೂಲಕ ದಾಳಿಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಬೀಗುತ್ತಿದ್ದ ಪಾಕಿಸ್ತಾನ ಸರ್ಕಾರ ಮತ್ತು ಪಾಕಿಸ್ತಾನ ಸೇನೆಗೆ ಅಮ್ಮರ್ ಹೇಳಿಕೆ ತೀವ್ರ ಇರುಸುಮುರುಸು ಉಂಟುಮಾಡಿದೆ.
'ಭಾರತೀಯ ವಾಯುಪಡೆ ಐಎಸ್​ಐ ಅಥವಾ ಪಾಕಿಸ್ತಾನದ ಸೇನೆಯ ಮೇಲೆ ದಾಳಿ ನಡೆಸಿಲ್ಲ. ಅವರು ಅಟ್ಯಾಕ್ ಮಾಡಿದ್ದು ಜಿಹಾದ್​ ವಿಚಾರವನ್ನು ಕಲಿಯುತ್ತಿರುವ ವಿದ್ಯಾರ್ಥಿಗಳ ಮೇಲೆ.. ಭಾರತೀಯ ವಾಯುಸೇನೆ ಟಾರ್ಗೆಟ್ ಪಾಕಿಸ್ತಾನೆ ಅಥವಾ ಐಎಸ್ ಐ ಅಲ್ಲ. ಜೈಶ್ ತರಬೇತಿ ಕೇಂದ್ರಗಳೇ ಟಾರ್ಗೆಟ್ ಆಗಿತ್ತು ಎಂದು ಕಿಡಿಕಾರಿದ್ದಾನೆ. ಅಲ್ಲದೆ ಈ ದಾಳಿಗೆ ಶೀಘ್ರದಲ್ಲೇ ಸೇಡು ತೀರಿಸಿಕೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದಾನೆ.
ಇನ್ನು ಬಾಲ್​ಕೋಟ್​ ದಾಳಿಯಲ್ಲಿ ಐಎಸ್​ಐನ ಕರ್ನಲ್​ ಸಲೀಮ್​ ಖ್ವಾರಿ ಹಾಗೂ ಜೈಷ್​​​ ತರಬೇತುದಾರ ಮೌಲಾನ್​ ಮೋಯಿನ್​ ಕೂಡ ಸತ್ತಿದ್ದಾರೆ ಎನ್ನಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಡಿಕೆ ಶಿವಕುಮಾರ್

Nepal Floods: ಭೀಕರ ಪ್ರವಾಹದಲ್ಲಿ 30 ದೇಶಗಳ ನಾಗರೀಕರು ನಾಪತ್ತೆ, ಅಮೆರಿಕದವರೇ ಅತೀ ಹೆಚ್ಚು!

ಎಂ.ಎಸ್. ಧೋನಿ ಸಿಎಸ್ ಕೆ ಯಲ್ಲಿ ಶೇ. 25 ರಷ್ಟು ಪಾಲು ಕೇಳಿದ್ದಾರೆಯೇ? 3,820 ಕೋಟಿ ರೂ ಮೊತ್ತದ ಕ್ಲೈಮ್ ಹಿಂದಿರುವ ಸತ್ಯವೇನು?

ವಿದ್ಯಾರ್ಥಿಗಳ ವಿರೋಧದ ಬೆನ್ನಲ್ಲೇ NLSIU ಘಟಿಕೋತ್ಸವ ರದ್ದು; ‘ಅನಿವಾರ್ಯ ಕಾರಣ’ ಎಂದ ವಿವಿ

Yash’s Toxic: ನೆಗೆಟಿವ್ ರಿವ್ಯೂ ನಡುವೆ 'ರೇಟಿಂಗ್' ತೆಗೆದುಹಾಕಿದ ಬುಕ್ ಮೈ ಶೋ; ನಿರೀಕ್ಷಿತ ಕಲೆಕ್ಷನ್ ಇಲ್ವಾ? ನೆಟ್ಟಿಗರಿಂದ ತರಾಟೆ!