ವಿದೇಶ

ಕಾಬೂಲ್ ನಲ್ಲಿ ಅವಳಿ ಸ್ಫೋಟ: 3 ಸಾವು, ಅಫ್ಘಾನ್ ಅಧ್ಯಕ್ಷೀಯ ಅಭ್ಯರ್ಥಿ ಸೇರಿ 22 ಮಂದಿಗೆ ಗಾಯ

Lingaraj Badiger
ಕಾಬೂಲ್: ಅಫ್ಘಾನಿಸ್ತಾನದ ಮುಖ್ಯ ಕಾರ್ಯನಿರ್ವಾಹಕ ಅಬ್ದುಲ್ಹಾ ಅಬ್ದುಲ್ಹಾ ಮತ್ತು ಸರ್ಕಾರದ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದ ಸಮಾರಂಭದಲ್ಲಿ ಕನಿಷ್ಠ ಎರಡು ಬಾಂಬ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ ಮತ್ತು 22 ಮಂದಿ ಗಾಯಗೊಂಡಿದ್ದಾರೆ.
ದೋಹಾದಲ್ಲಿ ಅಮೆರಿಕ ಮತ್ತು ತಾಲಿಬಾನ್ ನಡುವೆ ಶಾಂತಿ ಮಾತುಕತೆ ನಡೆಯುತ್ತಿರುವ ಮಧ್ಯೆಯೇ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಇಂದು ಅವಳಿ ಸ್ಫೋಟ ಸಂಭವಿಸಿದೆ.
ಶಿಯೈಟ್ ಹಜಾರ ನಾಯಕ ಅಬ್ದುಲ್ ಅಲಿ ಮಜರಿ ಅವರ 24ನೇ ಪುಣ್ಯತಿಥಿ ಕಾರ್ಯಕ್ರಮದ ವೇಳೆ ಈ ಸ್ಫೋಟ ಸಂಭವಿಸಿದ್ದು, ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಅಭ್ಯರ್ಥಿ ಅಬ್ದುಲ್ಹಾ ಹಾಗೂ ಮಾಜಿ ಅಧ್ಯಕ್ಷ ಹಮಿದ್ ಕರ್ಜಾಯಿ ಸೇರಿದಂತೆ ಹಲವು ರಾಜಕೀಯ ನಾಯಕರು ಭಾಗವಹಿಸಿದ್ದರು.
ನಮ್ಮ ಸಮೀಪದಲ್ಲಿಯೇ ಬಾಂಬ್ ಸ್ಫೋಟವಾಯಿತು. ಆದರೂ ಶಾಂತಿ ಕಾಪಾಡುವಂತೆ ನಾನು ದೇಶದ ಜನತೆಗೆ ಮನವಿ ಮಾಡುತ್ತೇನೆ ಎಂದು ಅಫ್ಘಾನ್ ಮಾಜಿ ಸ್ಪೀಕರ್ ಮೊಹಮ್ಮದ್ ಯ್ಯೂನಸ್ ಖನೂನಿ ಅವರು ಹೇಳಿದ್ದಾರೆ.
SCROLL FOR NEXT