ವಿದೇಶ

ಪಾಕಿಸ್ತಾನದಲ್ಲಿ 22 ಉಗ್ರಗಾಮಿ ಸಂಘಟನೆಗಳು ಸಕ್ರಿಯವಾಗಿವೆ; ಭಾರತೀಯ ಅಧಿಕಾರಿ

Sumana Upadhyaya
ವಾಷಿಂಗ್ಟನ್: ಜೈಶ್ ಎ ಮೊಹಮ್ಮದ್ ಸಂಘಟನೆಯ 9 ಉಗ್ರಗಾಮಿ ಶಿಬಿರಗಳು ಸೇರಿ 22 ಭಯೋತ್ಪಾದಕ ತರಬೇತಿ ಶಿಬಿರಗಳು ಪಾಕಿಸ್ತಾನದಲ್ಲಿ ಸಕ್ರಿಯವಾಗಿವೆ, ಆದರೆ ಅವುಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹಿರಿಯ ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ. ಗಡಿ ಭಾಗದಿಂದ ಭಯೋತ್ಪಾದಕರ ಉಪಟಳ ಮುಂದುವರಿದರೆ ಬಾಲಾಕೋಟ್ ವಾಯುದಾಳಿಯಂತಹ ಕಾರ್ಯಾಚರಣೆಗಳು ನಡೆಯುತ್ತವೆ ಎಂದು ಉಗ್ರ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಕೆಲ ವಾರದ ಹಿಂದೆ ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಜೈಶ್ ಎ ಮೊಹಮ್ಮದ್ ಸಂಘಟನೆಯ ಬಹುದೊಡ್ಡ ಶಿಬಿರದ ಮೇಲೆ ವಾಯುದಾಳಿ ನಡೆಸಿದ್ದ ಭಾರತ ಸುಮಾರು 350 ಉಗ್ರರನ್ನು ಕೊಂದುಹಾಕಿತ್ತು. ಇದಕ್ಕೂ ಮುನ್ನ ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ಸಿಆರ್ ಪಿಎಫ್ ಯೋಧರ ಮೇಲೆ ಆತ್ಮಾಹುತಿ ದಾಳಿ ನಡೆಸಿ ಸುಮಾರು 40 ಯೋಧರನ್ನು ಜೈಶ್ ಸಂಘಟನೆ ಕೊಂದು ಹಾಕಲಾಗಿತ್ತು.
ಭಯೋತ್ಪಾದನೆಗೆ ಪಾಕಿಸ್ತಾನ ಜಾಗತಿಕ ಮಟ್ಟದ ನೆಲೆಯಾಗಿದ್ದು ಭಯೋತ್ಪಾದನೆ ಸಂಘಟನೆಗಳ ವಿರುದ್ಧ ಮತ್ತು ಭಯೋತ್ಪಾದಕರ ವಿರುದ್ಧ ವಿಶ್ವಾಸಾರ್ಹ ಮತ್ತು ಪರಿಶೀಲನೆಯ ಕ್ರಮಗಳನ್ನು ಕೈಗೊಳ್ಳಲೇ ಬೇಕಾಗುತ್ತದೆ.ಆದರೆ ಪಾಕಿಸ್ತಾನ ಭಾರತದೊಂದಿಗೆ ಯುದ್ಧ ರೀತಿಯ ಸನ್ನಿವೇಶವನ್ನು ಸೃಷ್ಟಿಸುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಹೇಳುತ್ತಾರೆ.
ಜೈಶ್ ಸಂಘಟನೆಯ 9 ಉಗ್ರಗಾಮಿ ಸಂಘಟನೆ ಸೇರಿದಂತೆ 22 ಭಯೋತ್ಪಾದನೆ ತರಬೇತಿ ಶಿಬಿರಗಳು ಪಾಕಿಸ್ತಾನದಲ್ಲಿ ನೆಲೆಯೂರಿ ಸಕ್ರಿಯವಾಗಿವೆ. ಅವುಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಅಂತಾರಾಷ್ಟ್ರೀಯ ನಿಯಮವನ್ನು ಅನುಸರಿಸಿಯೇ ಬಾಲಕೋಟ್ ವಾಯುದಾಳಿಯನ್ನು ಉಗ್ರರ ದಮನಕ್ಕೆ ಕೈಗೊಳ್ಳಲಾಗಿದೆ. ಅದಾಗಿಯೂ ಫೆಬ್ರವರಿ 27ರಂದು 20 ಯುದ್ಧ ವಿಮಾನಗಳ ಮೂಲಕ ಪಾಕಿಸ್ತಾನ ಭಾರತೀಯ ಮಿಲಿಟರಿ ಪಡೆ ಮೇಲೆ ದಾಳಿ ನಡೆಸಿದೆ.
ಉಗ್ರಗಾಮಿಗಳ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳುವುದರ ಬದಲಿಗೆ ಪರಿಸ್ಥಿತಿಯಿಂದ ನುಣುಚಲು ಪ್ರಯತ್ನಿಸಿ ಪಾಕಿಸ್ತಾನ ಯುದ್ಧ ರೀತಿಯ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಕರಾಚಿಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ವಾಯುದಟ್ಟಣೆಯನ್ನು ತಡೆದು ಸುಳ್ಳು ಸುದ್ದಿಗಳನ್ನು ಹಬ್ಬಿಸಲು ನೋಡುತ್ತಿದೆ. ಭಾರತ ಅದಕ್ಕೆ ಪ್ರತಿಯಾಗಿ ಯುದ್ಧವನ್ನು ನಿಲ್ಲಿಸಲು ನೋಡುತ್ತಿದೆ ಎಂದು ಅಧಿಕಾರಿ ಹೇಳುತ್ತಾರೆ.
SCROLL FOR NEXT