ವಿದೇಶ

ಡಬ್ಲ್ಯುಎಚ್​ಒ ಮುಖ್ಯ ವಿಜ್ಞಾನಿಯಾಗಿ ಸೌಮ್ಯ ಸ್ವಾಮಿನಾಥನ್ ನೇಮಕ

Raghavendra Adiga
ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ  ಉಪ ಮಹಾನಿರ್ದೇಶಕಿಯಾಗಿದ್ದ ಸೌಮ್ಯ ಸ್ವಾಮಿನಾಥನ್ ಅವರನ್ನು ಸಂಸ್ಥೆಯಲ್ಲಿನ ಸುಧಾರಣಾ ಕ್ರಮಗಳ ಬಾಗವಾಗಿ ಮುಖ್ಯ ವಿಜ್ಞಾನಿಯಾಗಿ ನೇಮಕ  ಮಾಡಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಮ್ಯುಖ ಕಾರ್ಯಗಳು, ನಿಗದಿಪಡಿಸಬಹುದಾಫ಼ ಮಾನದಂಡಗಳು ಹಾಗೂ ಗುಣಮಟ್ಟ ಕಾಪಾಡಿಕೊಳ್ಳುವುದಕ್ಕಾಗಿ ರಚಿಸಲಾಗಿರುವ ನೂತನ ವಿಭಾಗದ ನೇತೃತ್ವವನ್ನು ಸ್ವಾಮಿನಾಥನ್ ವಹಿಸಿಕೊಳ್ಳುತ್ತಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಮೂವರು ಉಪ ಮಹಾನಿರ್ದೇಶಕರಲ್ಲಿ ಒಬ್ಬರಾಗಿದ್ದ ಸೌಮ್ಯಾ ಸ್ವಾಮಿನಾಥನ್ ಈ ಹುದ್ದೆ ಅಲಂಕರಿಸಿರುವ ಪ್ರಥಮ ಭಾರತೀಯಳೆನ್ನುವುದು ವಿಶೇಷ.
ಮುಂದಿನ ಐದು ವರ್ಷಗಳಲ್ಲಿ ಸಂಸ್ಥೆಯು ತನ್ನ ಮುನ್ನೂರು ಬಿಲಿಯನ್ ಗುರಿಗಳನ್ನು ಪೂರೈಸಿಕೊಳ್ಳುವುದು ಅಗತ್ಯ."ಸಾರ್ವತ್ರಿಕ ಆರೋಗ್ಯ ರಕ್ಷಣೆಯಿಂದ ಒಂದು ಶತಕೋಟಿ ಜನರಿಗೆ ಲಾಭವಾಗಿದ್ದು ಈಗ ಸಮಯ ಬದಲಾಗಿದೆ. ಹೀಗಾಗಿ ಅಗತ್ಯಕ್ಕೆ ತಕ್ಕಂತೆ ನಮ್ಮ ಧ್ಯೇಯೋದ್ದೇಶವನ್ನು ಬದಲಿಸಿಕೊಳ್ಳುತ್ತಿದ್ದೇವೆ" ಡಬ್ಲ್ಯುಎಚ್ ಒ ಹೇಳಿಕೆ ತಿಳಿಸಿದೆ.
SCROLL FOR NEXT