ವಿದೇಶ

ಚೀನಾದ ಉಯ್ಘರ್ ಮುಸ್ಲಿಂ ಅಧಿಕಾರಿಗೆ ಕಮ್ಯುನಿಸ್ಟ್ ಪಕ್ಷದಿಂದ ಗೇಟ್ ಪಾಸ್!

Srinivas Rao BV
ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದಿಂದ ಉಯ್ಘರ್ ಮುಸ್ಲಿಂ ಅಧಿಕಾರಿಗೆ ಉಚ್ಚಾಟನೆ ಮಾಡಲಾಗಿದೆ.
ಅಧಿಕಾರದ ದುರುಪಯೋಗ ಹಾಗೂ ಭ್ರಷ್ಟಾಚಾರದ ಆರೋಪದಡಿ ಉಯ್ಘರ್ ಮುಸ್ಲಿಂ ಅಧಿಕಾರಿ ನೂರ್ ಬೆಕ್ರಿಯನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. 
ನೂರ್ ಬೆಕ್ರಿ ರಾಷ್ಟ್ರೀಯ ಎನರ್ಜಿ ಆಡ್ಮಿನಿಸ್ಟ್ರೇಷನ್ ನ ಮಾಜಿ ಮುಖ್ಯಸ್ಥರಾಗಿದ್ದು, ಪಕ್ಷದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಹಾಗೂ  ಅಧಿಕಾರದ ದುರುಪಯೋಗ ಹಾಗೂ ಭ್ರಷ್ಟಾಚಾರದ ಆರೋಪದಡಿ ಉಚ್ಚಾಟನೆ ಮಾಡಲಾಗಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಚೀನಾ ಡೇಲಿ ವರದಿ ಪ್ರಕಟಿಸಿದ್ದಾರೆ.
ಚೀನಾದ ಕಮ್ಯುಸ್ಟ್ ಪಕ್ಷದಲ್ಲಿ ನೂರ್ ಬೆಕ್ರಿ 2008-14 ರ ಅವಧಿಯಲ್ಲಿ ಉಯ್ಘರ್ ಮುಸ್ಲಿಂ ಬಾಹುಳ್ಯದ ಕ್ಸಿನ್ಜಿಯಾಂಗ್ ಪ್ರಾಂತ್ಯದ ಅಧ್ಯಕ್ಷ ಸೇರಿದಂತೆ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. 
SCROLL FOR NEXT