ವಿದೇಶ

ಮಸೂದ್ ಅಜರ್ ಜಾಗತಿಕ ಉಗ್ರ ಘೋಷಣೆ ಪ್ರಕ್ರಿಯೆಗೆ ಜರ್ಮನಿ ಚಾಲನೆ!

Srinivas Rao BV
ಜರ್ಮನಿ: ಮುಂಬೈ ಉಗ್ರ ದಾಳಿ, ಪುಲ್ವಾಮ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಮಸೂದ್ ಅಜರ್ ನ್ನು ಜಾಗತಿಕ ಉಗ್ರನನ್ನಾಗಿ ಘೋಷಣೆ ಮಾಡುವುದಕ್ಕೆ ಯುರೋಪಿಯನ್ ಯೂನಿಯನ್ ನಲ್ಲಿ ಜರ್ಮನಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. 
ಮಸೂದ್ ಅಜರ್ ನಿಷೇಧಕ್ಕೆ ಚೀನಾ ಅಡ್ಡಗಾಲು ಹಾಕಿದ ಬೆನ್ನಲ್ಲೇ ಜರ್ಮನಿ ಆತನನ್ನು ಜಾಗತಿಕ ಉಗ್ರನನ್ನಾಗಿ ಘೋಷಿಸಿ ನಿಷೇಧ ವಿಧಿಸುವುದಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗಳಿಗೆ ಜರ್ಮನಿ ಚಾಲನೆ ನೀಡಿದೆ. ಇದಕ್ಕಾಗಿ ಯುರೋಪಿಯನ್ ಯೂನಿಯನ್ ನ ಹಲವು ರಾಷ್ಟ್ರಗಳೊಂದಿಗೆ ಜರ್ಮನಿ ಸಂಪರ್ಕದಲ್ಲಿದ್ದು, ಒಮ್ಮೆ ಕಾರ್ಯರೂಪಕ್ಕೆ ಬಂದ ನಂತರ ಯುರೋಪಿಯನ್ ಯೂನಿಯನ್ ನ ವ್ಯಾಪ್ತಿಗೆ ಬರುವ ಎಲ್ಲಾ 28 ರಾಷ್ಟ್ರಗಳಲ್ಲೂ ಮಸೂದ್ ಅಜರ್ ಗೆ ನಿಷೇಧ ವಿಧಿಸಿ ಅಲ್ಲಿರುವ ಆತನ ಆಸ್ತಿಗಳನ್ನು ವಶಕ್ಕೆ ಪಡೆಯಲಾಗುತ್ತದೆ. ಆದರೆ ಈ ಎಲ್ಲದಕ್ಕೂ ಜರ್ಮನಿ ಪ್ರಸ್ತಾವನೆಯನ್ನಷ್ಟೇ ಮುಂದಿಟ್ಟಿದ್ದು ಯುರೋಪಿಯನ್ ಯೂನಿಯನ್ ಈ ಬಗ್ಗೆ ಇನ್ನಷ್ಟೇ ನಿರ್ಣಯ ಕೈಗೊಳ್ಳಬೇಕಿದೆ. 
SCROLL FOR NEXT