ಬೀಜಿಂಗ್: ಪೂರ್ವ ಚೀನಾದ ಕೈಗಾರಿಕಾ ಪಾರ್ಕ್ ನಲ್ಲಿ ಉಂಟಾದ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 44ಕ್ಕೇರಿದೆ. ನೂರಾರು ಜನರಿಗೆ ಗಾಯವಾಗಿದೆ ಎಂದು ವರದಿಯಾಗಿದೆ.
ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದ ಯೆಂಚೆಂಗ್ ರಾಸಾಯನಿಕ ಕೈಗಾರಿಕಾ ಪಾರ್ಕ್ ನ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡು ಉಂಟಾದ ಸ್ಫೋಟದಿಂದ ಈ ಸಾವು ನೋವು ಸಂಭವಿಸಿದೆ ಎಂದು ಸರ್ಕಾರ ತಿಳಿಸಿದೆ. ಇಂದು ಬೆಳಗಿನ ವೇಳೆಗೆ ಮೃತಪಟ್ಟವರ ಸಂಖ್ಯೆ 44ಕ್ಕೇರಿದೆ ಎಂದು ಚೀನಾ ಡೈಲಿ ವರದಿ ಮಾಡಿದೆ.
ದುರ್ಘಟನೆ ಸ್ಥಳದಿಂದ 88 ಮಂದಿಯನ್ನು ರಕ್ಷಿಸಲಾಗಿದೆ ಎಂದು ತುರ್ತು ವ್ಯವಸ್ಥಾಪನಾ ಸಚಿವಾಲಯ ತಿಳಿಸಿದೆ.
ಸ್ಫೋಟದಲ್ಲಿ ಇನ್ನೂ ಹಲವರು ಸಿಲುಕಿಹಾಕಿಕೊಂಡಿದ್ದಾರೆ. ಸ್ಪೋಟದಿಂದ ಸುತ್ತಮುತ್ತಲ ಕಟ್ಟಡಗಳಿಗೆ ಸಹ ಹಾನಿಯಾಗಿದೆ. ರಕ್ಷಣಾ ಕಾರ್ಯಚರಣೆಗೆ 176 ಅಗ್ನಿಶಾಮಕ ಟ್ರಕ್ ಗಳು ಮತ್ತು 928 ಸಿಬ್ಬಂದಿಗಳು ನಿಯೋಜನೆಗೊಂಡಿದ್ದಾರೆ ಎಂದು ಸರ್ಕಾರದ ತುರ್ತು ನಿರ್ವಹಣೆ ಸಚಿವಾಲಯ ತಿಳಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos