ವಿದೇಶ

ಅರುಣಾಚಲವನ್ನು ದಕ್ಷಿಣ ಟಿಬೆಟ್ ಎಂದ ಚೀನಾ; 30,000 ವಿಶ್ವ ಭೂಪಟಗಳ ನಾಶ!

Srinivas Rao BV
ಬೀಜಿಂಗ್: ಚೀನಾದಲ್ಲಿ ಮುದ್ರಿಸಲಾಗಿದ್ದ 30,000 ವಿಶ್ವ ಭೂಪಟಗಳನ್ನು ನಾಶ ಮಾಡಲಾಗಿದ್ದು, ಭಾರತದ ಭೂ ಪ್ರದೇಶವಾಗಿರುವ ಅರುಣಾಚಲ ದೇಶವನ್ನು ದಕ್ಷಿಣ ಟಿಬೆಟ್ ಎಂದು ಕರೆದುಕೊಂಡಿದೆ.
ಅರುಣಾಚಲ ಪ್ರದೇಶ ಹಾಗೂ ತೈವಾನ್ ನ್ನು ಚೀನಾದಿಂದ ಬೇರ್ಪಡಿಸಿ ರಚಿಸಲಾಗಿದ್ದ ಭೂಪಟಗಳನ್ನು ಚೀನಾ ಅಧಿಕಾರಿಗಳು ನಾಶ ಮಾಡಿದ್ದಾರೆ. ಅರುಣಾಚಲ ಪ್ರದೇಶವನ್ನು ಚೀನಾ ಲಗಾಯ್ತಿನಿಂದ ದಕ್ಷಿಣ ಟಿಬೆಟ್ ಎಂದೇ ಪರಿಗಣಿಸುತ್ತಿದೆ. ಅರುಣಾಚಲ ಪ್ರದೇಶಕ್ಕೆ ಭಾರತದ ಯಾವುದೇ ನಾಯಕರು ಭೇಟಿ ನೀಡಿದರೂ ಸಹ ಅದನ್ನು ಚೀನಾ ವಿರೋಧಿಸುತ್ತದೆ. ಇದಷ್ಟೆ ಅಲ್ಲದೇ ತೈವಾನ್ ನ್ನೂ ಸಹ ತನ್ನದೇ ಭೂ ಪ್ರದೇಶವೆಂದು ಪ್ರತಿಪಾದನೆ ಮಾಡುತ್ತದೆ. ಚೀನಾ ಈಗ ನಾಶಪಡಿಸಿರುವ ಭೂಪಟಗಳನ್ನು ರಫ್ತು ಮಾಡುವುದಕ್ಕಾಗಿಯೇ ತಯಾರಿಸಿತ್ತು. ಆದರೆ ಅರುಣಾಚಲ ಪ್ರದೇಶ ಹಾಗೂ ತೈವಾನ್ ಭೂಪಟದಲ್ಲಿಲ್ಲದ ಕಾರಣ ಅದನ್ನು ನಾಶಪಡಿಸಲಾಗಿದೆ. 
SCROLL FOR NEXT