ವಿದೇಶ

ಬ್ರೆಕ್ಸಿಟ್ ಒಪ್ಪಂದಕ್ಕೆ 'ನೊ' ಎಂದ ಯುಕೆ ಸಂಸದರು, ತೆರೇಸಾ ಮೇಗೆ ಮುಖಭಂಗ

Raghavendra Adiga
ಲಂಡನ್: ಬ್ರಿಟನ್ ಪ್ರಧಾನಿ ತೆರೇಸಾ ಮೇ  ಅವರಿಗೆ ಬ್ರೆಕ್ಸಿಟ್ ವಿಚಾರದಲ್ಲಿ ಸಂಸತ್ತಿನಲ್ಲಿ ಮೂರನೇ ಬಾರಿಗೆ ಹಿನ್ನಡೆಯಾಗಿದೆ. ತೆರೇಸಾ ಮೇ  ಪ್ರಸ್ತಾಪಿಸಿದ ಬ್ರೆಕ್ಸಿಟ್ ಒಪ್ಪಂದವನ್ನು ಬ್ರಿಟಿಷ್ ಸಂಸದರು ನಿರಾಕರಿಸಿದ್ದಾರೆ.
ಹೌಸ್ ಆಫ್ ಕಾಮನ್ಸ್ ನ 344 ಸಂಸದರ ಪೈಕಿ 286 ಸಂಸದರು ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಹೋಗುವ ನಿಯಮಾವಳಿಗಳ ವಿರುದ್ಧ ಮತ ಚಲಾಯಿಸಿದ್ದಾರೆ. 
ಮೇ ಬುಧವಾರ ತಮ್ಮ ಕನ್ಸರ್ವೇಟಿವ್ ಪಕ್ಷದ ಸಂಸದರಿಗೆ ಎರಡು ಬಾರಿ ಸಂಸತ್ತಿನಲ್ಲಿ ಸೋಲು ಕಂಡಿದ್ದ ಬ್ರೆಕ್ಸಿಟ್ ನಿಯಮಾವಳಿ ಮಸೂದೆಯನ್ನು ಮೂರನೇ ಬಾರಿಗೆ ಮತಕ್ಕೆ ತರಲು ಒಪ್ಪಿಕೊಂಡರೆ ತಾವು ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದರು.
ಯುರೋಪಿಯನ್‌ ಒಕ್ಕೂಟದಿಂದ (ಇಯು) ಹೊರ ಬರಲು ಬ್ರಿಟನ್‌ಗೆ ಮೇ 22ರ ವರೆಗೆ ಒಕ್ಕೂಟವು ಅವಕಾಶ ನೀಡಿದೆ.  ಅದರಂತೆ , ಬ್ರೆಕ್ಸಿಟ್‌ ಒಪ್ಪಂದಕ್ಕೆ ಅನುಮೋದನೆ ಪಡೆಯಲು ಮಾರ್ಚ್‌ 29 ಕೊನೆಯ ದಿನವಾಗಿತ್ತು. ಆದರೆ ಇಂದೂ ಸಹ ಸಂಸತ್ತಿನಲ್ಲಿ ಅತಿ ಹೆಚ್ಚು ಸಂಸದರು ಬ್ರೆಕ್ಸಿಟ್ ಒಪ್ಪಂದದ ವಿರುದ್ಧ ಮತ ಚಲಾಯಿಸಿದ್ದು ಮೇ ಅವರಿಗೆ ಭಾರೀ ಹಿನ್ನಡೆಯಾಗಿದೆ.
SCROLL FOR NEXT