ವಿದೇಶ

ಮಸೂದ್ ಅಜರ್ ಜಾಗತಿಗ ಉಗ್ರ ಎಂಬ ಘೋಷಣೆ ಅಮೆರಿಕಾದ ರಾಜತಾಂತ್ರಿಕ ಗೆಲುವು: ಮೈಕ್ ಪೊಂಪಿಯೊ

Sumana Upadhyaya
ವಾಷಿಂಗ್ಟನ್: ಪಾಕಿಸ್ತಾನ ಮೂಲದ ಜೈಶ್ ಎ ಮೊಹಮ್ಮದ್ ಭಯೋತ್ಪಾದಕ(ಜೆಇಎಂ) ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿರುವುದನ್ನು ಸ್ವಾಗತಿಸಿರುವ ಅಮೆರಿಕಾ, ಇದು ಭಯೋತ್ಪಾದನೆ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯಗಳು ಮತ್ತು ಅಮೆರಿಕಾದ  ವಿದೇಶಾಂಗ ನೀತಿಗೆ ಸಂದ ಜಯ ಎಂದು ಹೇಳಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕಾ ಕಾರ್ಯದರ್ಶಿ ಮೈಕ್ ಪೊಂಪಿಯೊ, ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಗುರುತಿಸಲು ವಿಶ್ವಸಂಸ್ಥೆಯಲ್ಲಿ ಅಮೆರಿಕಾದ ರಾಜತಾಂತ್ರಿಕ ಇಲಾಖೆ ಪಟ್ಟಿರುವ ಶ್ರಮಕ್ಕೆ ಸಂದ ಫಲ ಎಂದು ಬಣ್ಣಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರಗಳಾದ ಅಮೆರಿಕಾ ಮತ್ತು ಬೇರೆ ರಾಷ್ಟ್ರಗಳು ಹಾಗೂ ಭಾರತದ ಸತತ ಪ್ರಯತ್ನಗಳಿಂದ ಕಳೆದ 10 ವರ್ಷಗಳಿಂದ ತಾಂತ್ರಿಕ ತಡೆಯೊಡ್ಡಿದ್ದ ಚೀನಾ ಸಹ ಸ್ವಾಗತಿಸಿರುವುದನ್ನು ಅಮೆರಿಕಾ ಸ್ವಾಗತಿಸಿದೆ.
SCROLL FOR NEXT