ವಿದೇಶ

ಶ್ರೀಲಂಕಾ ಬಾಂಬ್ ದಾಳಿ: ಫೋಟೋ ತೆಗೆಯುತ್ತಿದ್ದ ಭಾರತೀಯ ಛಾಯಾಗ್ರಾಹಕ ಪತ್ರಕರ್ತ ಬಂಧನ

Sumana Upadhyaya
ಕೊಲಂಬೊ: ಈಸ್ಟರ್ ಸಂಡೆ ಬಾಂಬ್ ಸ್ಫೋಟ ಘಟನೆ ನಡೆದ ನಂತರ ಶ್ರೀಲಂಕಾದಲ್ಲಿನ ಸ್ಥಿತಿಗತಿಯ ಬಗ್ಗೆ ಫೋಟೋ ತೆಗೆಯುತ್ತಿದ್ದ ಭಾರತೀಯ ಛಾಯಾಗ್ರಾಹಕ ಪತ್ರಕರ್ತನನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ. ಅವರು ಶಾಲೆಯೊಂದಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದರು ಎಂಬ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ದೆಹಲಿಯಲ್ಲಿ ರಾಯ್ಟರ್ಸ್ ಸುದ್ದಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿದ್ಧಿಖಿ ಅಹಮದ್ ಡ್ಯಾನಿಶ್ ನೆಗೊಂಬೊ ಶ್ರೀಲಂಕಾ ಸಿಟಿಯಲ್ಲಿ ಶಾಲೆಯೊಂದರ ಒಳಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದಾಗ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಛಾಯಾಗ್ರಾಹಕ ಪತ್ರಕರ್ತನನ್ನು ಬಂಧಿಸಿ ಮೇ 15ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದ ವಿದ್ಯಾರ್ಥಿಯ ಬಗ್ಗೆ ಮಾಹಿತಿ ಪಡೆಯಲು ಆತ ಕಲಿಯುತ್ತಿದ್ದ ಶಾಲೆಯೊಳಗೆ ಹೋಗಲು ಡ್ಯಾನಿಶ್ ಯತ್ನಿಸಿದ್ದರು. ಆಗ ಶಾಲೆಯಲ್ಲಿದ್ದ ಆತನ ಪೋಷಕರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಬಂಧಿಸಿದರು.
SCROLL FOR NEXT