ವಿದೇಶ

ನೈಜಿರಿಯಾ: 5 ಮಂದಿ ಭಾರತೀಯ ನಾವಿಕರ ಅಪಹರಿಸಿದ ಕಡಲ್ಗಳ್ಳರು!

Srinivasamurthy VN
ಅಬುಜಾ: ನೈಜಿರಿಯಾದಲ್ಲಿ ಮತ್ತೆ ಕಡಲ್ಗಳ್ಳರು ಅಟ್ಟಹಾಸ ಮೆರೆದಿದ್ದು, ಸರಕು ಸಾಗಾಣಿಕಾ ಹಡಗಿನ ಮೇಲೆ ದಾಳಿ ಮಾಡಿ ಭಾರತ ಮೂಲದ ಐದು ನಾವಿಕರನ್ನು ಅಪಹರಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದು, ಅಪಹರಣಕ್ಕೀಡಾದ ಭಾರತೀಯ ನಾವಿಕರ ಸುರಕ್ಷಿತ ಬಿಡುಗಡೆ ಬೇಕಾಗ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ನೈಜಿರಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
'ನೈಜಿರಿಯಾದಲ್ಲಿ ಭಾರತೀಯ ನಾವಿಕರ ಅಪಹರಣ ವಿಚಾರಕ್ಕೆ ಸಂಬಂದಧಪಟ್ಟಂತೆ ಪತ್ರಿಕೆಯಲ್ಲಿ ವರದಿಗಳನ್ನು ತಾವು ಓದಿದ್ದು, ಈ ಕುರಿತಂತೆ ನೈಜಿರಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಈ ಸಂಬಂಧ ವಿಚಾರ ಮುಟ್ಟಿಸಿದ್ದೇವೆ. ಅಂತೆಯೇ ಕಡಳ್ಗಳ್ಳರ ವಶದಲ್ಲಿರುವ ಭಾರತೀಯ ನಾವಿಕರ ಬಿಡುಗಡೆ ಸಂಬಂಧ ನೈಜಿರಿಯಾ ಸರ್ಕಾರದೊಂದಿಗೆ ಭಾರತ ಸರ್ಕಾರ ಚರ್ಚೆ ನಡೆಸಿದೆ ಎಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ. 
ಕಳೆದ ತಿಂಗಳು ನೈಜಿರಿಯಾ ಸಮುದ್ರ ಮಾರ್ಗದಲ್ಲಿ ಚಲಿಸುತ್ತಿದ್ದ ಸರಕು ಸಾಗಾಣಿಕಾ ಹಡಗಿನ ಮೇಲೆ ದಾಳಿ ನಡೆಸಿದ್ದ ಕಡಲ್ಗಳ್ಳರು ನೌಕೆಯನ್ನು ವಶಕ್ಕೆ ಪಡೆದಿದ್ದು ಮಾತ್ರವಲ್ಲದೇ ನೌಕೆಯಲ್ಲಿದ್ದ ಎಲ್ಲ ಭಾರತೀಯರ್ನು ಅಪಹರಿಸಿದ್ದರು.
SCROLL FOR NEXT