ಪಾಕಿಸ್ತಾನ: ಗ್ವಾಡರ್ ನಲ್ಲಿ ಫೈವ್ ಸ್ಟಾರ್ ಹೋಟೆಲ್ ಗೆ ನುಗ್ಗಿದ ಉಗ್ರರು
ಪಾಕಿಸ್ತಾನದ ಬಂದರು ನಗರಿ ಗ್ವಾಡಾರ್ ನ ಫೈವ್ ಸ್ಟಾರ್ ಹೋಟೆಲ್ ವೊಂದಕ್ಕೆ ಇಂದು ಕೆಲ ಶಸ್ತ್ರ ಸಜ್ಜಿತ ಉಗ್ರರು ನುಗ್ಗಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಗ್ವಾಡಾರ್: ಪಾಕಿಸ್ತಾನದ ಬಂದರು ನಗರಿ ಗ್ವಾಡಾರ್ ನ ಫೈವ್ ಸ್ಟಾರ್ ಹೋಟೆಲ್ ವೊಂದಕ್ಕೆ ಇಂದು ಕೆಲ ಶಸ್ತ್ರ ಸಜ್ಜಿತ ಉಗ್ರರು ನುಗ್ಗಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೂರ್ನಾಲ್ಕು ಉಗ್ರರು ಸೌಕರ್ಯ ಒದಗಿಸುವಂತೆ ಪೀಡಿಸಿದ ನಂತರ ಪಿಲ್ ಕಾಂಟಿನೆಂಟಲ್ ಹೋಟೆಲ್ ನಲ್ಲಿ ಗುಂಡಿನ ದಾಳಿ ನಡೆಸಲಾಗಿದೆ ಎಂದು ಗ್ವಾಡಾರ್ ಠಾಣಾಧಿಕಾರಿ ಅಸ್ಲಾಂ ಬಾಂಗುಲ್ ಜಾಯ್ ಹೇಳಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಯಾವುದೇ ಸಾವು ನೋವು, ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಸುಮಾರು 4-50 ರ ಸುಮಾರಿನಲ್ಲಿ ಶಸ್ತ್ರ ಸಜ್ಜಿತ ಮೂರ್ನಾಲ್ಕು ಉಗ್ರರು ಹೋಟೆಲ್ ಗೆ ನುಗ್ಗಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.