ಮೀನಾ ಮಂಗಲ್ 
ವಿದೇಶ

ಕಾಬೂಲ್ ನಲ್ಲಿ ದುಷ್ಕರ್ಮಿಗಳ ಅಟ್ಟಹಾಸ: ಅಫ್ಘಾನ್ ಮಾಜಿ ಪತ್ರಕರ್ತೆ ಮೀನಾಗೆ ಗುಂಡಿಕ್ಕಿ ಹತ್ಯೆ

ಮಾಜಿ ಟೆಲಿವಿಷನ್ ಪತ್ರಕತ್ರೆ ಹಾಗೂ ಸಲಹೆಗಾರ್ತಿಯೊಬ್ಬರನ್ನು ಅಪರಿಚಿತ ವ್ಯಕ್ತಿಯೊಬ್ಬ ಗುಂಡಿಕ್ಕಿ ಕೊಂದು ಹಾಕಿದ್ದಾರೆ.

ಕಾಬೂಲ್: ಮಾಜಿ ಟೆಲಿವಿಷನ್ ಪತ್ರಕತ್ರೆ ಹಾಗೂ ಸಲಹೆಗಾರ್ತಿಯೊಬ್ಬರನ್ನು ಅಪರಿಚಿತ ವ್ಯಕ್ತಿಯೊಬ್ಬ ಗುಂಡಿಕ್ಕಿ ಕೊಂದು ಹಾಕಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ತನಗೆ ಜೀವ ಬೆದರಿಕೆ ಇದೆ ಎಂದು ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದ ರಾಜಕೀಯ ಸಲಹೆಗಾರ್ತಿ ಮೀನಾ ಮಂಗಲ್ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.
ಪ್ರಮುಖ ಟಿವಿ ಚಾನಲ್ ಅರಿಯಾನಾ ನ್ಯೂಸ್ ಮಾಜಿ ವರದಿಗಾರ್ತಿಯಾಗಿದ್ದ ಮಿನಾ ಮಂಗಲ್ ಅವರನ್ನು ಕಾಬೂಲ್ ನ ಅವರ ನಿವಾಸದ ಸಮೀಪ ಬೈಕ್ ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆಂದು  ಪೊಲೀಸ್ ವಕ್ತಾರ ಬಸಿರ್ ಮುಜಾಹೀದ್ ತಿಳಿಸಿದ್ದಾರೆ.
ಅಫ್ಘಾನ್ ಸಂಸತ್ತಿನ ಸಾಂಸ್ಕೃತಿಕ ವ್ಯವಹಾರಗಳ ಆಯೋಗದ ಸಲಹೆಗಾರರಾಗಿದ್ದ ಮೀನಾ ಅವರನ್ನು ಯಾವ ಕಾರಣಕ್ಕೆ ಹತ್ಯೆಗೈಯಲಾಗಿದೆ ಎಂಬುದು ಇನ್ನೂ ತಿಳಿದಿಲ್ಲವಾದರೂ ಕೌಟುಂಬಿಕ ಕಲಹ ಇದರ ಹಿಂದಿನ ಕಾರಣವಾಗಿರಬಹುದು ಎಂದು ಪೋಲೀಸರು ಶಂಕಿಸಿದ್ದಾರೆ.
ಆದರೆ ಮೇ 3ರಂದು ಮೀನಾ "ತಮ್ಮ ಜೀವಕ್ಕೆ ಅಪಾಯವಿದೆ" ಎಂದು ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದರು ಇಷ್ತಾಗಿ ಆಕೆ ರಕ್ಷಣೆಗೆ ಮನವಿ ಸಲ್ಲಿಸಿದ್ದರೂ ಸರ್ಕಾರ ಅವರಿಗೆ ಸರಿಯಾದ ಭದ್ರತೆ ಒದಗಿಸಿಲ್ಲ ಹಾಗಾಗಿ ಪತ್ರಕರ್ತೆಯ ಹತ್ಯೆ ನಡೆದಿದೆ ಎಂದು ಮಾನವ ಹಕ್ಕುಗಳ ವಕೀಲರು, ಮಹಿಳಾ ಹಕ್ಕುಗಳ ಅಭಿಯಾನ ಹೋರಾಟಗಾರು ವಝ್ಮಾ ಫ್ರೊಗ್ ಹೇಳಿದ್ದಾರೆ.
ಇದರ ನಡುವೆ ಹಿಂದೊಮ್ಮೆ ಮೀನಾ ಅವರನ್ನು ಅಪಹರಿಸಿದ್ದ ಗುಂಪಿನಿಂದಲೇ ಅವರ ಹತ್ಯೆಯಾಗಿರಬಹುದು ಎಂದು ಮೀನಾ ಅವರ ತಾಯಿ ಸಂದೇಹ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT