ವಿದೇಶ

ರಾಯಿಟರ್ಸ್ ಪತ್ರಕರ್ತರ ಬಿಡುಗಡೆಗೆ ತಡೆಯಾಗಿದ್ದು ಸೇನೆಯಲ್ಲ, ಆಂಗ್ ಸಾನ್ ಸೂಕಿ?

Srinivasamurthy VN
ನವದೆಹಲಿ: ರೊಹಿಂಗ್ಯಾ ಮುಸ್ಲಿಮರ ಕುರಿತ ರಹಸ್ಯ ವರದಿ ತಯಾರಿಸಿ ಮ್ಯಾನ್ಮಾರ್ ಸೇನೆಯಿಂದ ಬಂಧಿತರಾಗಿದ್ದ ರಾಯಿಟರ್ಸ್ ಪತ್ರಕರ್ತರ ಬಿಡುಗಡೆಗೆ ತಡೆಯಾಗಿದದ್ದು, ಮಯನ್ಮಾರ್ ಸೇನೆಯಲ್ಲ ಬದಲಿಗೆ ಮಯನ್ಮಾರ್ ಸಚಿವೆ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಆಂಗ್ ಸಾನ್ ಸೂ ಕಿ ಎಂಬ ಆರೋಪ ಕೇಳಿ  ಬರುತ್ತಿದೆ.
ರಾಯಿಟರ್ಸ್ ಸುದ್ದಿ ಸಂಸ್ಥೆಯ ಪತ್ರಕರ್ತರಾದ ವಾ ಲೋನ್ ಮತ್ತು ಕ್ಯಾವ್ ಸೋ ಊ ಅವರ ಬಿಡುಗಡೆಗೆ ಸೂನ್ ಕಿ ವಿರೋಧ ವ್ಯಕ್ತಪಡಿಸಿದ್ದೇ ಅವರ ಬಿಡುಗಡೆ ತಡವಾಗಿತ್ತು ಎಂಬ ವಾದ ಕೇಳಿಬರುತ್ತಿದೆ. ಪತ್ರಕರ್ತರನ್ನು ಬಿಡುಗಡೆ ಮಾಡುವಂತೆ ರಾಜತಾಂತ್ರಿಕರು ಪದೇ ಪದೇ ಅವರಿಗೆ ಮನವಿ ಮಾಡುತ್ತಿದ್ದರು. ಆದರೆ ಸೂಕಿ ಇದಕ್ಕೆ ಸಮ್ಮತಿಸಿರಲಿಲ್ಲ ಎಂದು ಹೇಳಲಾಗಿದೆ.
ಹಲವು ಸಂದರ್ಭಗಳಲ್ಲಿ, ವಿದೇಶಿ ರಾಜತಾಂತ್ರಿಕರು ಪತ್ರಕರ್ತರ ಬಿಡುಗಡೆಯ ವಿಷಯವನ್ನು ಪ್ರಸ್ತಾಪಿಸಿದಾಗಲೆಲ್ಲ ಸೂ ಕಿ ಕೋಪಗೊಳ್ಳುತ್ತಿದ್ದರು. ಪತ್ರಕರ್ತರ ಬಗ್ಗೆ ನ್ಯಾಯಾಲಯ ತೀರ್ಪು ನೀಡುವ ಮೊದಲೇ, ಜಪಾನ್ ಟೆಲಿವಿಷನ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ, ಅವರು ಕಾನೂನು ಉಲ್ಲಂಘಿಸಿದ್ದಾರೆ ಎಂದು ಹೇಳಿ ಸುದ್ದಿಗೆ ಗ್ರಾಸವಾಗಿದ್ದರು.
ಆದರೆ ಕೊನೆಗೂ, 500 ದಿನಗಳಿಗೂ ಹೆಚ್ಚು ಅವಧಿಯನ್ನು ಜೈಲಿನಲ್ಲಿ ಕಳೆದ ಬಳಿಕ ಈ ವಾರ ಇಬ್ಬರು ಪತ್ರಕರ್ತರು ಅಧ್ಯಕ್ಷರ ಕ್ಷಮಾದಾನದಡಿ ಬಿಡುಗಡೆಯಾಗಿದ್ದರು. 
ರೊಹಿಂಗ್ಯಾ ಮುಸ್ಲಿಮ್ ಅಲ್ಪಸಂಖ್ಯಾತರ ಹತ್ಯಾಕಾಂಡವನ್ನು ವರದಿ ಮಾಡಿರುವುದಕ್ಕಾಗಿ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು.
SCROLL FOR NEXT