ಗೋಮ: ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಪೂರ್ವ (ಡಿಸಿಆರ್ ) ಪೂರ್ವ ನಗರವಾದ ಗೋಮದಲ್ಲಿ ಸಣ್ಣ ವಿಮಾನವೊಂದು ಅಪಘಾತಕ್ಕೀಡಾದ ಪರಿಣಾಮ ಕನಿಷ್ಠ 23 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸ್ಥಳೀಯ ಬ್ಯುಸಿ ಬೀ ಎಂಬ ಕಂಪನಿಗೆ ಸೇರಿದ್ದ ಈ ವಿಮಾನದಲ್ಲಿ 17 ಪ್ರಯಾಣಿಕರು ಮತ್ತು ಇತರ ಸಿಬ್ಬಂದಿ, ಬೆನಿ ನಗರಕ್ಕೆ ತೆರಳುವಾಗ ಅಪಘಾತಕ್ಕೀಡಾಗಿದೆ ಎಂದು ಪೂರ್ವ ಡಿಆರ್ ಕಾಂಗೋದ ಉತ್ತರ ಕಿವು ಗರ್ವನರ್ ತಿಳಿಸಿದ್ದಾರೆ.
ಈಗ 23 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಗೋಮಾ ರಕ್ಷಣಾ ಸೇವೆಯ ಸಮನ್ವಯಾಧಿಕಾರಿ ಜೋಸೆಫ್ ಮಾಕುಂದಿ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಉತ್ತರ ಗೋಮದ ಬಳಿ 350 ಕಿಲೋ ಮೀಟರ್ ಎತ್ತರ ಪ್ರದೇಶದಲ್ಲಿ ಡಾರ್ನಿಯರ್ -228 ವಿಮಾನ, ಸಿಟಿ ಆಫ್ ಬೆನಿ ವಿಮಾನಕ್ಕೆ ಡಿಕ್ಕಿ ಹೊಡೆದಿದ್ದು, ಧಗಧಗನೆ ಹೊತ್ತಿ ಉರಿದಿವೆ ಎಂದು ಪ್ರತ್ಯೇಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಗೊಂಡವರ ಬಗ್ಗೆ ನಿರ್ದಿಷ್ಠ ಮಾಹಿತಿ ತಿಳಿದುಬಂದಿಲ್ಲ.