ವಿದೇಶ

ವಿಶ್ವಸಂಸ್ಥೆಗೂ ತಟ್ಟಿದ ಆರ್ಥಿಕ ಮುಗ್ಗಟ್ಟು! ಖರ್ಚಿಗೆ ಹಣವಿಲ್ಲದೆ ವೆಚ್ಚ ಕಡಿತದ ಮೊರೆಹೊಕ್ಕ ಆಂಟೋನಿಯೊ ಗುಟೆರೆಸ್ 

Raghavendra Adiga

ವಿಶ್ವಸಂಸ್ಥೆ: ವಿಶ್ವದೆಲ್ಲೆಡೆ ಇದೀಗ ಆರ್ಥಿಕ ಮುಗ್ಗಟ್ಟಿನ ಕಾಲ. ಇನ್ನು ವಿಶ್ವಸಂಸ್ಥೆಯು ಸಹ ಇದಕ್ಕೆ ಹೊರತಲ್ಲ. ವಿಶ್ವಸಂಸ್ಥೆ ಸಹ 230 ಮಿಲಿಯನ್ ಡಾಲರ್ ಕೊರತೆಯನ್ನು ಎದುರಿಸುತ್ತಿದೆ  ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ  ಆಂಟೋನಿಯೊ ಗುಟೆರೆಸ್ ಸೋಮವಾರ ಹೇಳಿದ್ದಾರೆ ಮತ್ತು ಅಕ್ಟೋಬರ್ ಅಂತ್ಯದ ವೇಳೆಗೆ ಖರ್ಚಿಗೆ ಹಣವಿಲ್ಲದ ಸ್ಥಿತಿ ಎದುರಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಯುಎನ್ ಸೆಕ್ರೆಟರಿಯೇಟ್ ನ 37,000 ಉದ್ಯೋಗಿಗಳನ್ನುದ್ದೇಶಿಸಿ ಬರೆದ ಪತ್ರದಲ್ಲಿ ಗುಟೆರೆಸ್ ಅವರು ಸಂಬಳ ಮತ್ತು ಭತ್ಯೆಗಳನ್ನು ಪಾವತಿಸುವುದನ್ನು ಖಚಿತಪಡಿಸಿಕೊಳ್ಲಲು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ಹೇಳಿದ್ದಾರೆ.

"ಸದಸ್ಯ ರಾಷ್ಟ್ರಗಳು 2019 ರಲ್ಲಿ ನಮ್ಮ ನಿಯಮಿತ ಬಜೆಟ್ ಕಾರ್ಯಾಚರಣೆಗಳಿಗೆ ಬೇಕಾದ ಒಟ್ಟು ಮೊತ್ತದ ಶೇಕಡಾ 70 ರಷ್ಟು ಮಾತ್ರ ಪಾವತಿಸಿವೆ. ಇದು ಸೆಪ್ಟೆಂಬರ್ ಅಂತ್ಯದ ವೇಳೆಗೆ 30 230 ಮಿಲಿಯನ್ ನಗದು ಕೊರತೆಗೆ ಕಾರಣವಾಗಲಿದೆ.ಹಾಗಾಗಿ ವೆಚ್ಚ ಕಡಿತದ ಕ್ರಮ ಅನುಸರಿಸಬೇಕಿದೆ.

ವೆಚ್ಚ ಕಡಿತದ ಭಾಗವಾಗಿ ಸಭೆ, ಸಮಾವೇಶಗಳನ್ನು ಮುಂದೂಡಲು ನಿರ್ಣಯಿಸಲಾಗಿದೆ.ಸೇವಾ ಕಡಿತ, ಅಧಿಕಾರಿಗಳ ಪ್ರಯಾಣದ ಮೇಲೆ ನಿರ್ಬಂಧ ಹೇರುವುದಕ್ಕೆ ತೀರ್ಮಾನಿಸಿದೆ.ಅಲ್ಲದೆ ವಿದ್ಯುತ್ ಉಳಿತಾಯಕ್ಕೆ ಸಹ ಗುಟೆರೆಸ್ ಮನವಿ ಮಾಡಿದ್ದಾರೆ.

"ನಮ್ಮ ಆರ್ಥಿಕ ಆರೋಗ್ಯದ ಬಗೆಗೆ ಅಂತಿಮ ಜವಾಬ್ದಾರಿ ಸದಸ್ಯ ರಾಷ್ಟ್ರಗಳದ್ದಾಗಿದೆ."ಗುಟೆರೆಸ್  ಹೇಳಿದ್ದಾರೆ. ಶಾಂತಿಪಾಲನಾ ಕಾರ್ಯಾಚರಣೆಗಳಿಗೆ  ವಿಶ್ವಸಂಸ್ಥೆ ಎಷ್ಟು ಹಣ ಪಾವತಿಸುತ್ತದೆ ಎನ್ನುವುದನ್ನು ಇದು ಖಚಿತಪಡಿಸಿಲ್ಲ.

SCROLL FOR NEXT