ವಿದೇಶ

ಲಿಥಿಯಂ-ಐಯಾನ್ ಬ್ಯಾಟರಿ ಅಭಿವೃದ್ಧಿ: ಮೂವರು ಸಾಧಕರಿಗೆ ರಸಾಯನಶಾಸ್ತ್ರ ನೊಬೆಲ್ ಗೌರವ

Raghavendra Adiga

2019 ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಬುಧವಾರ ಘೋಷಣೆಯಾಗಿದೆ. ಲಿಥಿಯಂ-ಐಯಾನ್ ಬ್ಯಾಟರಿಗಳ ಅಭಿವೃದ್ಧಿಗಾಗಿ ನಡೆಸಿದ ಸಂಶೋಧನೆಗೆ ಮೂವರು ರಸಾಯನಶಾಸ್ತ್ರ ಸಂಶೋಧಕರಿಗೆ ಈ ಸಾಲಿನ ಪ್ರತಿಷ್ಠಿತ ಗೌರವ ಸಂದಿದೆ.

ಜಾನ್ ಬಿ ಗುಡ್ನೊಫ್, ಎಂ ಸ್ಟಾನ್ಲಿ ವೈಟಿಂಗ್ಹ್ಯಾಮ್ ಮತ್ತು ಅಕಿರಾ ಯೋಶಿನೊ ಅವರುಗಳು ಈ ಮಹತ್ವದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಲಿಥಿಯಂ-ಐಯಾನ್ ಬ್ಯಾಟರಿಗಳು ನಮ್ಮ ಜೀವನದಲ್ಲಿ ಕ್ರಾಂತಿಯನ್ನುಂಟು ಮಾಡಿವೆ ಮತ್ತು ಮೊಬೈಲ್ ಫೋನ್‌ಗಳಿಂದ ಹಿಡಿದು ಲ್ಯಾಪ್‌ಟಾಪ್ ಮತ್ತು ಎಲೆಕ್ಟ್ರಿಕ್ ವಾಹನಗಳವರೆಗೆ ಎಲ್ಲದರಲ್ಲೂ ಬಳಸಲ್ಪಡುತ್ತವೆ. ಈ ಮೂವರು ಸಾಧಕರು ತಮ್ಮ ಸಮ್ಶೋಧನೆಯ ಮೂಲಕ ನಿಸ್ತಂತು, ಪಳಯುಳಿಕೆ ಇಂಧನರಹಿತ ಸಮಾಜಕ್ಕೆ ಬುನಾದಿ ಹಾಕಿದ್ದಾರೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ವಿವರಿಸಿದೆ.

ಇನ್ನು  97 ವರ್ಷ ವಯಸ್ಸಿನ ಜಾನ್ ಬಿ ಗುಡ್ನೊಫ್ ನೊಬೆಲ್ ಪ್ರಶಸ್ತಿ ಪಡೆದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ.ಇದಕ್ಕೆ ಹಿಂದೆ ಕಳೆದ ಸಾಲಿನಲ್ಲಿ ಆರ್ಥರ್ ಆಶ್ಕಿನ್ (96) ಈ ಮಹತ್ವದ ಪ್ರಶಸ್ತಿ ಪಡೆದ ಅತ್ಯಂತ ಹಿರಿಯರೆಂದು ಗುರುತಿಸಲ್ಪಟ್ಟಿದ್ದರು.

SCROLL FOR NEXT