ಸಂಗ್ರಹ ಚಿತ್ರ 
ವಿದೇಶ

'ಫತ್ಫ್' ಮುಜುಗರ ತಪ್ಪಿಸಿಕೊಳ್ಳಲು ಜೆಯುಡಿ, ಲಷ್ಕರ್ ಉಗ್ರರ ಬಂಧಿಸಿದ ಪಾಕಿಸ್ತಾನ!

ಅಂತಾರಾಷ್ಟ್ರೀಯ ಹಣಕಾಸು ಕ್ರಿಯಾ ಕಾರ್ಯಪಡೆ (FATF) ಸಾಮಾನ್ಯಸಭೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ ಲಷ್ಕರ್ ಮತ್ತು ಜಮಾತ್ ಉದ್ ದವಾ ಉಗ್ರ ಸಂಘಟನೆಯ ಪ್ರಮುಖ ಉಗ್ರರನ್ನು ಬಂಧಿಸಿದೆ.

ಇಸ್ಲಾಮಾಬಾದ್​: ಅಂತಾರಾಷ್ಟ್ರೀಯ ಹಣಕಾಸು ಕ್ರಿಯಾ ಕಾರ್ಯಪಡೆ (FATF) ಸಾಮಾನ್ಯಸಭೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ ಲಷ್ಕರ್ ಮತ್ತು ಜಮಾತ್ ಉದ್ ದವಾ ಉಗ್ರ ಸಂಘಟನೆಯ ಪ್ರಮುಖ ಉಗ್ರರನ್ನು ಬಂಧಿಸಿದೆ.

ಮೂಲಗಳ ಪ್ರಕಾರ ಉಗ್ರವಾದಕ್ಕೆ ಆರ್ಥಿಕ ನೆರವು ನೀಡಿದ ಆರೋಪದಡಿ ನಿಷೇಧಿತ ಸಂಘಟನೆಗಳ ನಾಲ್ವರು ಉಗ್ರ ನಾಯಕರನ್ನು ಪಾಕಿಸ್ತಾನದ ಲಾ ಎನ್​ಪೋರ್ಸ್​​ಮೆಂಟ್​ ಏಜೆನ್ಸಿಗಳು ಗುರುವಾರ ಬಂಧಿಸಿವೆ.  ನಿಷೇಧಿತ ಎಲ್​ಇಟಿ ಅಥವಾ ಜೆಯುಡಿ ಸಂಘಟನೆಗೆ ಹಣಕಾಸಿನ ನೆರವು ನೀಡಿದ ಪ್ರೊ. ಜಾಫರ್​ ಇಬ್ಕಾಲ್​, ಯಹ್ಯಾ ಅಜೀಜ್​, ಮೊಹಮ್ಮದ್​ ಅಶ್ರಫ್​​ ಹಾಗೂ ಅಬ್ದುಲ್ ಸಲಾಂ ಎಂಬುವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ಫ್ರಾನ್ಸ್ ರಾಜಧಾನಿ ಪ್ಯಾರಿಸ್ ​ನಲ್ಲಿ ಇದೇ ಅಕ್ಟೋಬರ್​ 12ರಿಂದ 15ರವೆರೆಗೆ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್​ ಫೋರ್ಸ್​ (ಎಫ್​​ಎಟಿಎಫ್​)ನ ಸಭೆ ನಡೆಯುತ್ತಿರುವ ಹಿನ್ನೆಲೆ ಇಂತಹದೊಂದು ಕ್ರಮಕ್ಕೆ ಪಾಕಿಸ್ತಾನ ಮುಂದಾಗಿದೆ ಎನ್ನಲಾಗಿದೆ. ಈ ಹಿಂದೆ ಉಗ್ರವಾದವನ್ನು ಹತ್ತಿಕ್ಕುವ ಸಂಬಂಧ ಫತ್ಫ್​ ವಿಧಿಸಿದ್ದ ನಿಮಯಗಳನ್ನು ಪಾಲಿಸದೆ ಪಾಕಿಸ್ತಾನ ಈ ಉಗ್ರರನ್ನು ಗ್ರೇ ಪಟ್ಟಿ ಸೇರಿಸಿತ್ತು. 2019ರ ಅಕ್ಟೋಬರೊಳಗೆ ಪಾಕ್ ಎಚ್ಚೆತ್ತುಕೊಳ್ಳದಿದ್ದರೆ ಕಪ್ಪುಪಟ್ಟಿಗೆ ಸೇರಿಸುವುದಾಗಿ ಸಹ ಎಚ್ಚರಿಕೆ ನೀಡಿತ್ತು. ಇದರಿಂದ ಆತಂಕಕ್ಕೆ ಒಳಗಾಗಿದ್ದ ಪಾಕ್ ಕೆಲವು ಉಗ್ರ ನಾಯಕರನ್ನು ಬಂಧಿಸಿದೆ ಎನ್ನಲಾಗಿದೆ. 

ಈ ಬಗ್ಗೆ ಮಾಹಿತಿ ನೀಡಿರುವ ಪಾಕಿಸ್ತಾನದ ಉಗ್ರ ನಿಗ್ರಹ ದಳದ ಅಧಿಕಾರಿಗಳು, ಉಗ್ರ ನಿಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಕ್ರಿಯಾ ಯೋಜನೆಯಡಿಯಲ್ಲಿನ ನಿರ್ಧಾರಗಳನ್ನು ಪರಿಣಾಮಕಾರಿಯಾಗಿ ಜಾರಿಮಾಡಲಾಗುತ್ತಿದೆ. ಜೆಯುಡಿ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯ್ಯೀದ್ ನನ್ನು ಈಗಾಗಲೇ ಗೃಹ ಬಂಧನದಲ್ಲಿರಿಸಲಾಗಿದೆ. ಈ ಪ್ರಕರಣ ಕೂಡ ವಿಚಾರಣೆಯಲ್ಲಿದೆ. ಇನ್ನೂ ಸಾಕಷ್ಟು ಕ್ರಮಗಳನ್ನು ಪಾಕಿಸ್ತಾನ ಸರ್ಕಾರ ಕೈಗೊಳ್ಳಲಿದೆ ಎಂದು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್