ವಿದೇಶ

ಭಾರತದ ಮರಿಯಂ ತ್ರೇಸಿಯಾರಿಗೆ  ಸಂತ ಪದವಿ ಘೋಷಿಸಿದ ಪೋಪ್ ಫ್ರಾನ್ಸಿಸ್

Nagaraja AB

ವ್ಯಾಟಿಕನ್ : ಕೇರಳದ ಸಿಸ್ಟರ್ ಮರಿಯಂ ತ್ರೇಸಿಯಾ ಅವರಿಗೆ   ಭಾನುವಾರ ವ್ಯಾಟಿಕನ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪೋಪ್ ಫ್ರಾನ್ಸಿಸ್  ಸಂತ ಪದವಿ ಘೋಷಿಸಿದರು.

ಈ ವಿಶೇಷ ಸಮಾರಂಭದಲ್ಲಿ  ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್  ನೇತೃತ್ವದ ಭಾರತ ನಿಯೋಗ ಹಾಜರಿತ್ತು.

1876ರ ಏಪ್ರಿಲ್ 26 ರಂದು ಕೇರಳದ ತ್ರಿಶ್ಯೂರಿನಲ್ಲಿ ಜನಿಸಿದ್ದ ಮರಿಯಂ ತ್ರೇಸಿಯಾ, 1914ರಲ್ಲಿ  ತ್ರಿಶ್ಯೂರಿನಲ್ಲಿ ಸಿಸ್ಟರ್ಸ್ ಆಫ್ ಹೋಲಿ ಫ್ಯಾಮಿಲಿ ಪ್ರಾರ್ಥನಾ ಸಭೆಯನ್ನು ಆರಂಭಿಸಿದ್ದರು. 1926ರ ಜೂನ್ 8 ರಂದು ನಿಧನ ಹೊಂದಿದ್ದರು. 

ಏಪ್ರಿಲ್ 9, 200 ಇಸವಿಯಲ್ಲಿ ಅಂದಿನ ಪೋಪ್ ಜಾನ್ ಪಾಲ್ ಮರಿಯಂ ತ್ರೇಸಿಯಾ ಅವರನ್ನು ಪವಿತ್ರ ಎಂದು ಘೋಷಿಸಿದ್ದರು.ಸಿಸ್ಟರ್ ಆಫ್ ಹೋಲಿ ಫ್ಯಾಮಿಲಿಯ ಸದಸ್ಯರಿಗೆ ಕೇರಳ ಮುಖ್ಯಮಂತ್ರಿ   ಪಿಣರಾಯ್ ವಿಜಯನ್ ಶುಭ ಕೋರಿದ್ದಾರೆ.

SCROLL FOR NEXT