ವಿದೇಶ

ಪಾಕಿಸ್ತಾನಕ್ಕೆ ಮತ್ತೊಂದು ಆಘಾತ: 'ಡಾರ್ಕ್ ಗ್ರೆ' ಪಟ್ಟಿಗೆ ಸೇರಿಸಲು ಎಫ್ಎಟಿಎಫ್ ಚಿಂತನೆ? 

Sumana Upadhyaya

ಪ್ಯಾರಿಸ್; ಅಂತಾರಾಷ್ಟ್ರೀಯ ಭಯೋತ್ಪಾದಕ ಹಣಕಾಸು ಕಾವಲುನಾಯಿ ಎಫ್ಎಟಿಎಫ್ ಎದುರು ಪಾಕಿಸ್ತಾನ ಕೆಂಗಣ್ಣಿಗೆ ಗುರಿಯಾಗಿದೆ. ಪಾಕಿಸ್ತಾನ ಭಯೋತ್ಪಾದನೆಯನ್ನು ಮಟ್ಟ ಹಾಕಲು ಅದು ಅಂತಿಮ ಎಚ್ಚರಿಕೆ ನೀಡಿದ್ದು ಪರಿಸ್ಥಿತಿ ಸುಧಾರಿಸದಿದ್ದರೆ ದೇಶವನ್ನು ಡಾರ್ಕ್ ಗ್ರೆ(ಕಡು ಬೂದಿ) ಪಟ್ಟಿಗೆ ಸೇರಿಸುವ ಸಾಧ್ಯತೆಯಿದೆ.


ಹಣಕಾಸು ಕಾರ್ಯಪಡೆ(ಎಫ್ಎಟಿಎಫ್)ಯ ಸಮಗ್ರ ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳು, ಸೂಚನೆಯ ಪ್ರಕಾರ ಪಾಕಿಸ್ತಾನವನ್ನು ಇತರ ಸದಸ್ಯ ರಾಷ್ಟ್ರಗಳಿಂದ ಪ್ರತ್ಯೇಕವಾಗಿಡುವ ಅಭಿಪ್ರಾಯ ಕೇಳಿಬಂದಿತು ಎಂದಿದ್ದಾರೆ.


ಎಫ್ಎಟಿಎಫ್ ನಿಂದ ತೀವ್ರ ಕ್ರಮ ಎದುರಿಸುವ ಪರಿಸ್ಥಿತಿ ಪಾಕಿಸ್ತಾನಕ್ಕೆ ಬಂದೊದಗಿದ್ದು 27 ವಿಷಯಗಳ ಪೈಕಿ ಪಾಕಿಸ್ತಾನ ಕೇವಲ 6 ವಿಷಯಗಳನ್ನು ನಿರ್ವಹಿಸುವಲ್ಲಿ ಸಾಧ್ಯವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಎಫ್ಎಟಿಎಫ್, ಪಾಕಿಸ್ತಾನ ಕುರಿತು ತನ್ನ ನಿರ್ಧಾರವನ್ನು ಇದೇ 18ಕ್ಕೆ ಅಂತಿಮಗೊಳಿಸಲಿದೆ.

ಎಫ್ಎಟಿಎಫ್ ನಿಯಮ ಪ್ರಕಾರ, ಬೂದು(ಗ್ರೆ ಲಿಸ್ಟ್) ಮತ್ತು ಕಪ್ಪು(ಬ್ಲಾಕ್) ಪಟ್ಟಿ ಮಧ್ಯೆ ಒಂದು ಅಗತ್ಯದ ಹಂತವಿದ್ದು ಅದನ್ನು ಕಪ್ಪು ಬೂದು ಪಟ್ಟಿ ಎನ್ನಲಾಗುತ್ತದೆ. ಇದರರ್ಥ, ಬಲವಾದ ಎಚ್ಚರಿಕೆಯನ್ನು ದೇಶಕ್ಕೆ ನೀಡುವುದಾಗಿದ್ದು ಈ ಮೂಲಕ ತನ್ನನ್ನು ತಿದ್ದುಕೊಂಡು ಸುಧಾರಿಸಿಕೊಳ್ಳಲು ಸಂಬಂಧಪಟ್ಟ ದೇಶಕ್ಕೆ ಕೊನೆಯ ಅವಕಾಶವಾಗಿರುತ್ತದೆ. ಮೂರನೇ ಹಂತದವರೆಗೆ ಎಚ್ಚರಿಕೆಯ ಸಂದೇಶವನ್ನು ಕಪ್ಪು ಬೂದು ಪಟ್ಟಿ ಎಂದು ಕರೆಯಲಾಗುತ್ತದೆ. ಇದೀಗ ಎಫ್ಎಟಿಎಫ್ ಕೊನೆಯ ಎಚ್ಚರಿಕೆ ಸಂದೇಶವನ್ನು ಪಾಕಿಸ್ತಾನಕ್ಕೆ ನೀಡಿದ್ದು ಅದು ನಾಲ್ಕನೇ ಹಂತದ್ದಾಗಿದೆ.


ಅಕ್ರಮ ಹಣ ವರ್ಗಾವಣೆ, ಭಯೋತ್ಪಾದಕರಿಗೆ ಹಣಕಾಸು ನೆರವು, ಇತರ ಬೆದರಿಕೆ ಮತ್ತು ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಗೆ ಧಕ್ಕೆ ತರುವುದನ್ನು ನಿಗ್ರಹಿಸಲು 1989ರಲ್ಲಿ ಸ್ಥಾಪಿಸಲ್ಪಟ್ಟ ಅಂತರ ಸರ್ಕಾರ ಸಂಸ್ಥೆ ಎಫ್ಎಟಿಎಫ್ ಆಗಿದೆ. 

SCROLL FOR NEXT