ವಿದೇಶ

ಬಾಂಗ್ಲಾ ಯುವತಿಯರ ಕಳ್ಳಸಾಗಣೆ ಆರೋಪ: ಸಿಂಗಾಪುರದಲ್ಲಿ ಭಾರತೀಯ ದಂಪತಿಗಳ ವಶಕ್ಕೆ

Raghavendra Adiga

ಸಿಂಗಾಪುರ್: ತಮ್ಮ ನೈಟ್ ಕ್ಲಬ್ ಗಳಲ್ಲಿ ಕೆಲಸ ಮಾಡುವ ಬಾಂಗ್ಲಾದೇಶದ ಮಹಿಳೆಯರಿಗೆ ಕಿರುಕುಳ ನಿಡುತ್ತಿರುವುದು, ಸಂಬಳ ನೀಡದೆ ಹಿಂಸಿಸುತ್ತಿರುವ ಹಿನ್ನೆಲೆ ಸಿಂಗಾಪುರದಲ್ಲಿ ಭಾರತೀಯ ಮೂಲದ ದಂಪತಿಗಳನ್ನು ವಶಕ್ಕೆ ಪಡೆಯಲಾಗಿದೆ. ಅವರ ಮೇಲೆ ಮಾನವ ಕಳ್ಳಸಾಗಣೆ ಆರೋಪ ಸಹ ಹೇರಲಾಗಿದೆ. ದಂಪತಿಗಳು ತಮ್ಮ ನೌಕರರ ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಿಕೊಂಡು  ಅವರಲ್ಲಿ ಒಬ್ಬರನ್ನು ವೇಶ್ಯಾವಾಟಿಕೆಗೆ ಒತ್ತಾಯಪೂರ್ವಕ ತಳ್ಳಿದ ಆರೋಪದ ಸಹ ಇದೆ.

ಮಲ್ಕರ್ ಸವ್ಳಾರಾಂ ಅನಂತ್ (51) ಮತ್ತು ಅವರ ಪತ್ನಿ ಪ್ರಿಯಾಂಕಾ ಭಟ್ಟಾಚಾರ್ಯ ರಾಜೇಶ್ (31) ಈ ಆರೋಪಿಗಳೆಂದು ಗುರುತಿಸಲಾಗಿದೆ.ತಮ್ಮ ಹಿಂದಿ ಮನರಂಜನಾ ಕ್ಲಬ್ ಕಂಗನ್‌ನಲ್ಲಿ ನರ್ತಕರಾಗಿ ಕೆಲಸ ಮಾಡುತ್ತಿದ್ದ ಮಹಿಳೆಯರನ್ನು ತಮ್ಮ ವಾಸಸ್ಥಳದಲ್ಲಿ ಬಂಧಿಸಿಟ್ಟು ಅವರ ಮೊಬೈಲ್ ಫೋನ್ ಮತ್ತು ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.ಅಲ್ಲದೆ ಅವರಿಗೆ ಮಾಸಿಕ ವೇತನ  982 ಸಿಂಗಾಪುರ್ ಡಾಲರ್ ಪಾವತಿಸಿಲ್ಲ ಎಂದೂ ದೂಷಿಸಲಾಗಿದೆ.

ಪ್ರಕರಣದ ವಿಚಾರಣೆ ನಡೆಸಿರುವ  ಜಿಲ್ಲಾ ನ್ಯಾಯಾಧೀಶ ಶೈಫುದ್ದೀನ್ ಸಾರುವಾನ್ ತೀರ್ಪನ್ನು ನವೆಂಬರ್ 15 ಕ್ಕೆ ಕಾಯ್ದಿರಿಸಿದ್ದಾರೆ. ಸಿಂಗಾಪುರದ ಡೆಪ್ಯೂಟಿ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾದ ಜೇಮ್ಸ್ ಚೆವ್ ಮತ್ತು ರಿಂಪಲ್‌ಜಿತ್ ಕೌರ್ ದಂಪತಿಗಳ ವಿರುದ್ಧದ ಪ್ರಕರಣವನ್ನು ದಾಖಲಿಸಿದ್ದು 20 ದಿನಗಳಿಗಿಂತ ಹೆಚ್ಚಿನ ಅವಧಿಯ ವಿಚಾರಣೆಯ ಬಳಿಕ ನ್ಯಾಯಾಧೀಶರು ತೀರ್ಪು ಕಾಯ್ದಿರಿಸಿದ್ದಾರೆ.

ಅನಂತ್ ಅವರ ಮೇಲೆ ಮಾನವ ಕಳ್ಳಸಾಗಣೆ ತಡೆ ಕಾಯ್ದೆ (ಪಿಎಚ್‌ಟಿಎ) ಅಡಿಯಲ್ಲಿನ ಮೂರು ಆರೋಪ ಗಳನ್ನು ಸೇರಿ ಒಟ್ಟು ಐದು ಆಪಾದನೆಗಳಿದೆ.ಇತರ ಎರಡು ಆರೋಪಗಳಲ್ಲಿ ಆತ  ಮಹಿಳೆಯೊಬ್ಬರ ವೇಶ್ಯಾವಾಟಿಕೆ ಗಳಿಕೆಯ ಮೇಲೆ ಜೀವನ ನಿರ್ವಹಿಸಿದ್ದಾನೆ ಹಾಗೂ ಕಂಗನ್ ಕ್ಲಬ್ ಅನ್ನು ತನ್ನ ಖಾಸಗಿ  ನಿಯೋಜನೆಯ ಸ್ಥಳವಾಗಿ ನಿರ್ವಹಿಸುತ್ತಾನೆ. ಎಂಬ ಆರೋಪವಿದೆ. ಇನ್ನು ಪ್ರಿಯಾಂಕಾ ಸಹ ಐದು ಆರೋಪಗಳನ್ನು ಹೊತ್ತಿದ್ದು ಮಹಿಳೆಯೊಬ್ಬರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಿದ ಆರೋಪ ಈಕೆಯ ಮೇಲಿದೆ.

ದಂಪತಿಗಳು ತಪ್ಪಿತಸ್ಥರೆಂದು ಸಾಬೀತಾದರೆ, ಅವರು ದೇಶದ 2015 ರ ಕಾರ್ಮಿಕ ಕಳ್ಳಸಾಗಣೆ ಕಾನೂನಿನಡಿಯಲ್ಲಿ ಮೊದಲ ಅಪರಾಧಿಗಳಾಗುತ್ತಾರೆ ಮತ್ತು 10 ವರ್ಷಗಳವರೆಗೆ ಜೈಲುವಾಸ ಅನುಭವಿಸಬಹುದು ಅಲ್ಲದೆ 100,000 ಸಿಂಗಾಪುರ್ ಡಾಲರ್ ದಂಡ ಕಟ್ಟಬೇಕಾಗುವುದು.ಪ್ರಸ್ತುತ ಆರೋಪಿ ದಂಪತಿಗಳು ತಲಾ 20,000 ಸಿಂಗಾಪುರ್ ಡಾಲರ್ ಮೊತ್ತದ ಬಾಂಡ್ ಗಳ ಮೇಲೆ ಜಾಮೀನು ಪಡೆದಿದ್ದಾರೆ.

SCROLL FOR NEXT