ವಿದೇಶ

ಯೆಮೆನ್ ಜೈಲಿನ ಮೇಲೆ ಸೌದಿ ನೇತೃತ್ವದ ಪಡೆಗಳಿಂದ ವೈಮಾನಿಕ ದಾಳಿ: ಕನಿಷ್ಠ 50 ಕೈದಿಗಳು ಸಾವು

Srinivas Rao BV

ಸನಾ ಸೌದಿ ನೇತೃತ್ವದ ಮೈತ್ರಿಕೂಟ ಪಡೆಗಳು ಕಳೆದ ರಾತ್ರಿ  ಯೆಮನ್ ನ ಕೇಂದ್ರ ಪ್ರಾಂತ್ಯದ  ಧಾಮರ್ ನ ಜೈಲಿನ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 50 ಯುದ್ಧ ಕೈದಿಗಳು ಸಾವನ್ನಪ್ಪಿದ್ದಾರೆ ಎಂದು ಹೌತಿ ನಿಯಂತ್ರಿತ ಆರೋಗ್ಯ ಸಚಿವಾಲಯ ಭಾನುವಾರ ಬೆಳಿಗ್ಗೆ ಪ್ರಕಟಣೆಯಲ್ಲಿ ತಿಳಿಸಿದೆ.

'ಜೈಲಿನ  ಮೇಲೆ ಮೈತ್ರಿಕೂಟದ  ಯುದ್ಧ ವಿಮಾನಗಳು ಏಳು ವೈಮಾನಿಕ ದಾಳಿಗಳನ್ನು ನಡೆಸಿದ್ದು, ದಾಳಿಗಳಿಂದ ಕನಿಷ್ಠ 50 ಮಂದಿ  ಸಾವನ್ನಪ್ಪಿದ್ದು, ಇನ್ನೂ 100 ಮಂದಿ ಗಾಯಗೊಂಡಿದ್ದಾರೆ.   ರಕ್ಷಣಾ ತಂಡಗಳು  ಬದುಕುಳಿದವರಿಗಾಗಿ ಕಲ್ಲುಮಣ್ಣು ಅವಶೇಷಗಳಡಿ ಇನ್ನೂ ಶೋಧ ನಡೆಸುತ್ತಿವೆ.  ಅನೇಕ  ಗಾಯಾಳುಗಳು ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗಬಹುದು.' ಎಂದು  ಪ್ರಕಟಣೆ ತಿಳಿಸಿದೆ. 

ಈ ಮಧ್ಯೆ,' ದಾಳಿಗೆ ಗುರಿಯಾಗಿಸಿಕೊಂಡ ಜೈಲು ಧಮಾರ್;ನ  ಮಧ್ಯದಲ್ಲಿರುವ ಸಮುದಾಯ ಕಾಲೇಜಿನ ಸಂಕೀರ್ಣದೊಳಗಿದೆ. ಅಂತಾರಾಷ್ಟ್ರೀಯ ರೆಡ್;ಕ್ರಾಸ್ ಸಮಿತಿ ಇಲ್ಲಿಗೆ ಹಲವು ಬಾರಿ ಭೇಟಿ ನೀಡಿದೆ.' ಎಂದು ಹೌತಿ ನಿಯಂತ್ರಣದ ಅಲ್-ಮಸಿರಾ ಟೆಲಿವಿಷನ್ ತನ್ನ ವೆಬ್ ನಲ್ಲಿ ತಿಳಿಸಿದೆ. 

'ಸುಮಾರು 170 ಕೈದಿಗಳು ಸರ್ಕಾರಿ ಪಡೆಗಳೊಡನೆ ಘರ್ಷಣೆ ನಡೆಯುವಾಗ ಸೆರೆಹಿಡಿಯಲ್ಪಟ್ಟು, ಈ ಜೈಲಿನಲ್ಲಿ ತಿಂಗಳುಗಟ್ಟಲೆ ಇದ್ದಾರೆ. ಈ ಕೈದಿಗಳು ವಿನಿಮಯ ಒಪ್ಪಂದದಂತೆ ಕೆಲವೇ  ದಿನಗಳಲ್ಲಿ ಬಿಡುಗಡೆಯಾಗುವವರಿದ್ದರು.' ಎಂದು ಟಿವಿ ವಾಹಿನಿ ತಿಳಿಸಿದೆ. 

ಅಧಿಕೃತವಾಗಿ  ಅನ್ಸರ್ ಅಲ್ಲಾ ಎಂದು ಕರೆಯಲ್ಪಡುವ ಹೌತಿ, ಧಾರ್ಮಿಕ-ರಾಜಕೀಯ ಸಶಸ್ತ್ರ ಆಂದೋಲನವಾಗಿದೆ. ಈ ಗುಂಪುಗಳು ಉತ್ತರ ಯೆಮೆನ್;ನ ಅನೇಕ ಪ್ರದೇಶಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿವೆ. ರಾಜಧಾನಿ  ಸನಾದಿಂದ ದಕ್ಷಿಣಕ್ಕೆ 100 ಕಿ.ಮೀ ದೂರದಲ್ಲಿ ಧಮರ್ ಇದೆ. ಯೆಮೆನ್ ಅಧ್ಯಕ್ಷ ಅಬ್ದು-ರಬ್ಬು  ಮನ್ಸೂರ್ ಹಾಡಿ ಮತ್ತು ಅವರ ಸರ್ಕಾರವನ್ನು ಪದಚ್ಯುತಗೊಳಿಸಲು ಒತ್ತಾಯಿಸಿದ ನಂತರ ಧಮರ್  ಮತ್ತು ಸನಾ ಮತ್ತು ಇತರ ಹಲವು  ಉತ್ತರ ಪ್ರಾಂತ್ಯಗಳು 2014ರಿಂದ ಹೌತಿ ನಿಯಂತ್ರಣದಲ್ಲಿವೆ.

SCROLL FOR NEXT