ವಿದೇಶ

ಜಾಧವ್ ಗೆ ರಾಜತಾಂತ್ರಿಕ ನೆರವು, ಪಾಕ್ ಪ್ರಸ್ತಾಪಕ್ಕೆ ಭಾರತದ ಒಪ್ಪಿಗೆ 

Srinivas Rao BV

ಇಸ್ಲಾಮಾಬಾದ್: ಬೇಹುಗಾರಿಕೆ ಆರೋಪದ ಹಿನ್ನೆಲೆ ಪಾಕಿಸ್ತಾನದ ಜೈಲಿನಲ್ಲಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಗೆ ರಾಜತಾಂತ್ರಿಕ ನೆರವು ನೀಡುವ ಪಾಕಿಸ್ತಾನದ ಪ್ರಸ್ತಾಪಕ್ಕೆ ಭಾರತ ಒಪ್ಪಿಗೆ ಸೂಚಿಸಿದೆ. 

ಭಾರತದ ಒಪ್ಪಿಗೆ ಹಿನ್ನೆಲೆಯಲ್ಲಿ, ಪಾಕಿಸ್ತಾನದಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿ ಅಧಿಕಾರಿಗಳು ಜಾಧವ್ ಭೇಟಿಗೆ ಆಗಮಿಸಿದ್ದು ಸೂಕ್ತ ನೆರವು ಲಭ್ಯವಾಗುವ ಲಕ್ಷಣಗಳಿವೆ. 

ಪಾಕಿಸ್ತಾನದಲ್ಲಿರುವ ಭಾರತದ ಡೆಪ್ಯುಟಿ ಹೈ ಕಮಿಷನರ್ ಗೌರನ್ ಅಹ್ಲುವಾಲಿಯಾ ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಲು ವಿದೇಶಾಂಗ ಇಲಾಖೆ ಕಚೇರಿಗೆ ಆಗಮಿಸಿದ್ದಾರೆ. 

 ಜಾಧವ್ ಗೆ ರಾಜತಾಂತ್ರಿಕ ನೆರವು ನೀಡಬೇಕಾದರೆ ಪಾಕಿಸ್ತಾನದ ಅಧಿಕಾರಿಗಳು ಅಲ್ಲಿರುವಂತಿಲ್ಲ. ಭಾರತದ ರಾಜತಾಂತ್ರಿಕ ಅಧಿಕಾರಿಗಳೊಂದಿಗೆ ಕುಲಭೂಷಣ್ ಜಾಧವ್ ಅವರಿಗೆ ಖಾಸಗಿ ಭೇಟಿಗೆ ಅವಕಾಶ ನೀಡಲು ಭಾರತ ಪಟ್ಟು ಹಿಡಿದಿತ್ತು. ಕಳೆದ ಬಾರಿ ಆಗಸ್ಟ್ ನಲ್ಲಿ ಜಾಧವ್ ಗೆ ರಾಜತಾಂತ್ರಿಕ ನೆರವು ನೀಡಲು ಮುಂದಾಗಿದ್ದ ಪಾಕಿಸ್ತಾನ ಕೆಲವು ಷರತ್ತುಗಳನ್ನು ವಿಧಿಸಿತ್ತು.

SCROLL FOR NEXT