ವಿದೇಶ

ಬಾಯಿಗೆ ಟೇಪ್ ಹಾಕಿರುವ ಮೊಸಳೆ, ಹೆಬ್ಬಾವು ಹಿಡಿದು ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ ಪಾಕ್ ಸಿಂಗರ್, ವಿಡಿಯೋ!

Vishwanath S

ಇಸ್ಲಾಮಾಬಾದ್: ಮೊಸಳೆ, ಹೆಬ್ಬಾವು ಮತ್ತು ಹಾವುಗಳ ಬಾಯಿಗೆ ಟೇಪ್ ಸುತ್ತಿ ತಾನು ಧೈರ್ಯವಂತೆ ಎಂದು ತೋರಿಸಿರುವ ಪಾಕ್ ಗಾಯಕಿಯೊಬ್ಬಳು ಕಾಶ್ಮೀರ ವಿಚಾರವಾಗಿ ನೀವು ಮಾತನಾಡಿದರೆ ನಿಮ್ಮ ಮೇಲೆ ಹಾವುಗಳನ್ನು ಬಿಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಹೆದರಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. 

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕಳೆದ ತಿಂಗಳು ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ರದ್ದು ಮಾಡಿತ್ತು. ಇದಕ್ಕೆ ಕೆರಳಿರುವ ಪಾಕ್ ಗಾಯಕಿ ರಬಿ ಪಿರ್ಜಾದಾ ಮೋದಿಗೆ ಹಾವು ಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. 

ಕೋಣೆಯೊಂದರಲ್ಲಿ ಹೆಬ್ಬಾವು, ಮೊಸಳೆ ಮತ್ತು ಹಾವುಗಳ ಬಾಯಿಗೆ ಟೇಪ್ ಸುತ್ತಿದ್ದು ಈ ವೇಳೆ ಹಾವುಗಳನ್ನು ಕೈಯಲ್ಲಿ ಹಿಡಿದು ರಬಿ ಪೌರುಷದ ಮಾತುಗಳನ್ನಾಡಿದ್ದಾರೆ. ಈ ವಿಡಿಯೋಗೆ ನೋಡಿದ ನೆಟಿಗರು ಹಾಸ್ಯಾತ್ಮಕವಾಗಿ ಕಮೆಂಟ್ ಮಾಡುತ್ತಿದ್ದಾರೆ.

SCROLL FOR NEXT