ವಿದೇಶ

ಹೆಚ್ಚು ಕಾಲ ಸೇವೆ ಸಲ್ಲಿಸಿದ ನಾಯಕಿ: ಇಂದಿರಾ, ಥ್ಯಾಚರ್, ಕುಮಾರತುಂಗ ದಾಖಲೆ ಮುರಿದ ಆ ಮಹಿಳೆ ಬಗ್ಗೆ ಇಲ್ಲಿದೆ ಮಾಹಿತಿ

Srinivas Rao BV

ಢಾಕಾ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅತಿಹೆಚ್ಚು ಕಾಲ ಆಡಳಿತ ಮಾಡಿದ ಪ್ರಸಿದ್ಧ ಮಹಿಳಾ ವಿಶ್ವ ನಾಯಕಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 

ಭಾರತದ ಇಂದಿರಾ ಗಾಂಧಿ, ಬ್ರಿಟನ್‌ನ ಮಾರ್ಗರೇಟ್ ಥ್ಯಾಚರ್ ಮತ್ತು ಶ್ರೀಲಂಕಾದ ಚಂದ್ರಿಕಾ ಕುಮಾರತುಂಗ ಸೇರಿದಂತೆ ವಿವಿಧ ದೇಶಗಳ ವಿಶ್ವ  ಮಹಿಳಾ ಮುಖ್ಯಸ್ಥರ ಹಿಂದಿನ ದಾಖಲೆಯನ್ನು  ಹಸೀನಾ ಮುರಿದಿದ್ದಾರೆ ಎಂಬುದು ವಿಕಿಲೀಕ್ಸ್‌ನ ಇತ್ತೀಚಿನ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. 

ಸೇಂಟ್ ಲೂಸಿಯಾದ ಗವರ್ನರ್ ಜನರಲ್ ಡೇಮ್ ಪರ್ಲೆಟ್ ಲೂಸಿ ಹೆಚ್ಚು ಕಾಲ ಮಹಿಳಾ ಮುಖ್ಯಸ್ಥರಾಗಿದ್ದಾರೆ.ಅವರು ಸೆಪ್ಟೆಂಬರ್ 11, 1997 ರಿಂದ ಡಿಸೆಂಬರ್ 31, 2017 ರವರೆಗೆ ಅಧಿಕಾರದಲ್ಲಿದ್ದು 20 ವರ್ಷ ದೇಶ ಆಳಿದರೂ ಅವರು ವಿಶ್ವ ರಾಜಕಾರಣದಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯಲಿಲ್ಲ.  ಐಸ್ಲ್ಯಾಂಡ್‌ನ ವಿಗ್ಡಿಸ್ ಫಿನ್‌ಬೋಗಡೊಟ್ಟಿರ್ ಅವರು ಆಗಸ್ಟ್ 1, 1980 ರಿಂದ ಆಗಸ್ಟ್ 1, 1996 ರವರೆಗೆ ಸರಕಾರದ ಮುಖ್ಯಸ್ಥರಾಗಿದ್ದರೂ ಅವರು ಸಹ ರಾಜಕಾರಣದಲ್ಲಿ ಹೆಚ್ಚು ಜನಪ್ರಿಯರಾಗಲಿಲ್ಲ. ಡೊಮೆನಿಕಾದ ಪ್ರಧಾನ ಮಂತ್ರಿಯಾಗಿ ಡೇಮ್ ಉಜೆನಿನ್ 1980 ರ ಜುಲೈ 21 ರಿಂದ 1995 ರ ಜೂನ್ 14 ರವರೆಗೆ ಅಂದರೆ 14 ವರ್ಷ 328 ದಿನ ದೇಶದ ಆಡಳಿತ ಮಾಡಿದ್ದಾರೆ. 

ಮೇರಿ ಮ್ಯಾಕ್ ಅಲೀಸ್ 13 ವರ್ಷ 364 ದಿನ  ಐರ್ಲೆಂಡ್‌ನ ಮಹಿಳಾ ಅಧ್ಯಕ್ಷರಾಗಿ, 

ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ವಿಶ್ವದ ಮಹಿಳಾ ರಾಷ್ಟ್ರಗಳ ಮುಖ್ಯಸ್ಥರಲ್ಲಿ ಅಗ್ರಸ್ಥಾನದಲ್ಲಿದ್ದಾರೆ.ನವೆಂಬರ್ 22, 2005 ರಂದು ಅಧಿಕಾರ ವಹಿಸಿಕೊಂಡ ಮರ್ಕೆಲ್ ಈಗಲೂ ದೇಶ ಮುನ್ನಡೆಸುತ್ತಿದ್ದಾರೆ. 

ಹಸೀನಾ ಈಗ ಸತತ ಮೂರು ಬಾರಿಯ ನಂತರವೂ ನಾಲ್ಕನೇ ಬಾರಿಗೆ ಪ್ರಧಾನಿಯಾಗಿ ಕೆಲಸ  ಮಾಡುತ್ತಿದ್ದಾರೆ.ಮೊದಲಿಗೆ ಅವರು 1996 ರಿಂದ 2001 ರವರೆಗೆ ಪ್ರಧಾನಿಯಾಗಿ ನಂತರ ಅವರು 2008 ರಲ್ಲಿ ಅಧಿಕಾರಕ್ಕೆ ಮರಳಿದರು. ಡಿಸೆಂಬರ್ 30, 2018 ರಂದು ನಡೆದ ರಾಷ್ಟ್ರೀಯ ಚುನಾವಣೆಯಲ್ಲಿ, ಅವರ ಪಕ್ಷ ಸಂಸತ್ತಿನಲ್ಲಿ ಗರಿಷ್ಠ ಸ್ಥಾನ ಪಡೆಯಿತು. ಅವರು ಸತತ ಮೂರು ಅವಧಿಗೆ ಪ್ರಧಾನಿಯಾಗಿದ್ದಾರೆ. ಜೊತೆಗೆ ಈಗಾಗಲೇ ಪ್ರಧಾನ ಮಂತ್ರಿಯಾಗಿ 15 ವರ್ಷ ಪೂರೈಸಿದ್ದಾರೆ ಮತ್ತು ಈಗ ಅವರು ತಮ್ಮ ನಾಲ್ಕನೇ ಅಧಿಕಾರವಧಿಯ ಪೈಕಿ ಮೊದಲ ವರ್ಷಕ್ಕೆ ಕಾಲಿಟ್ಟಿದ್ದಾರೆ.

ಶೇಖ್ ಹಸೀನಾ ಅವರು ಸರ್ಕಾರದ ಏಕೈಕ ಮುಖ್ಯಸ್ಥರಾಗಿದ್ದು, ಅವರು ಬ್ರಿಟನ್‌ನ ಮಾರ್ಗರೇಟ್ ಥ್ಯಾಚರ್ ಅವರ ದಾಖಲೆ ಮುರಿದಿದ್ದಾರೆ. ಥ್ಯಾಚರ್ 1979 ರ ಮೇ 4 ರಿಂದ 1990 ರ ನವೆಂಬರ್ 28 ರವರೆಗೆ 11 ವರ್ಷ 208 ದಿನಗಳ ಕಾಲ ಬ್ರಿಟನ್ ರಾಜ್ಯಭಾರ ಮಾಡಿದ್ದರು. ಇಂದಿರಾ ಗಾಂಧಿ ವಿವಿಧ ಅವಧಿಯಲ್ಲಿ 15 ವರ್ಷಗಳ ಕಾಲ  ಭಾರತದ ಪ್ರಧಾನಿಯಾಗಿದ್ದರು.ಶ್ರೀಲಂಕಾದ ಚಂದ್ರಿಕಾ ಕುಮಾರ ತುಂಗ ಪ್ರಧಾನಿಯಾಗಿ ಮತ್ತು ರಾಷ್ಟ್ರಪತಿಯಾಗಿ ಒಟ್ಟು 11 ವರ್ಷ,ಏಳು ದಿನ ಕರ್ತವ್ಯ ನಿರ್ವಹಿಸಿದ್ದಾರೆ. 

ನಾಲ್ವರು ಮಹಿಳೆಯರು ಸರ್ಕಾರದ ಮುಖ್ಯಸ್ಥರಾಗಿ ಹೆಚ್ಚು ಕಾಲ ಆಡಳಿತ ಮಾಡಿ ವಿಶ್ವದಲ್ಲೇ ಪ್ರಸಿದ್ಧರಾಗಿದ್ದಾರೆ. ಅವರ ಪೈಕಿ ಇಂದಿರಾ ಗಾಂಧಿ, ಮಾರ್ಗರೇಟ್ ಥ್ಯಾಚರ್, ಏಂಜೆಲಾ ಮರ್ಕೆಲ್ ಮತ್ತು ನಂತರ ಈಗ ಶೇಖ್ ಹಸೀನಾ ಸೇರಿದ್ದಾರೆ. ನಾಲ್ಕನೇ ಬಾರಿಗೆ ಅಧಿಕಾರ ವಹಿಸಿಕೊಂಡಿರುವ ಹಸೀನಾ ಪ್ರಸಿದ್ಧ ವಿಶ್ವನಾಯಕಿಯರ ದಾಖಲೆ ಮುರಿದಿದ್ದಾರೆ.
 

SCROLL FOR NEXT