ವಿದೇಶ

ಕಾಶ್ಮೀರ ವಿವಾದ: ಭಾರತದ ಬೆಂಬಲಕ್ಕೆ ನಿಂತ ಯುರೋಪಿಯನ್ ಸಂಸದರು, ಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕ್ ಗೆ ತರಾಟೆ

Lingaraj Badiger

ಬ್ರಸೆಲ್ಸ್: ಜಮ್ಮು ಮತ್ತು ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಭಾರತವನ್ನು ಬೆಂಬಲಿಸಿರುವ ಯುರೋಪಿಯನ್ ಸಂಸದರು, ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಯುರೋಪಿಯನ್ ಸಂಸತ್ ನಲ್ಲಿ ನಡೆದ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಸದರಾದ ರಿಸ್ಜಾರ್ಡ್ ಜಾರ್ನೆಕಿ ಮತ್ತು ಫುಲ್ವಿಯೊ ಮಾರ್ಟುಸ್ಸಿಯೆಲ್ಲೊ ಅವರು, ಭಾರತ ಶ್ರೇಷ್ಠ ಪ್ರಜಾಪ್ರಭುತ್ವವನ್ನು ಹೊಂದಿದೆ ಎಂದು ಹೇಳುವ ಮೂಲಕ ಭಾರತವನ್ನು ಬೆಂಬಲಿಸಿದ್ದಾರೆ. 

ಭಯೋತ್ಪಾದಕರಿಗೆ ಆಶ್ರಯ ನೀಡಿದ್ದಕ್ಕಾಗಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಯುರೋಪಿಯನ್ ಸಂಸದರು, ಪಾಕಿಸ್ತಾನ ಅಣು ಬಾಂಬ್ ಬೆದರಿಕೆ ಅತ್ಯಂತ ಕಳವಳಕಾರಿ ಎಂದು ಹೇಳಿದ್ದಾರೆ.

ಭಾರತ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಪ್ರಜಾಪ್ರಭುತ್ವ ಹೊಂದಿದೆ. ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದನಾ ಕೃತ್ಯಗಳನ್ನು ನಾವು ಗಮನಿಸಬೇಕಿದೆ. ಈ ಉಗ್ರರು ಚಂದ್ರನಿಂದ ಬರುವುದಿಲ್ಲ. ಅವರು ನೆರೆಯ ದೇಶದಿಂದ ಬರುತ್ತಿದ್ದಾರೆ. ಹೀಗಾಗಿ ನಾವು ಭಾರತವನ್ನು ಬೆಂಬಲಿಸಬೇಕಿದೆ ಎಂದು ರಿಸ್ಜಾರ್ಡ್ ಜಾರ್ನೆಕಿ ಅವರು ಹೇಳಿದ್ದಾರೆ.

ಪಾಕಿಸ್ತಾನದಲ್ಲಿರುವ ಭಯೋತ್ಪಾದಕರು ಯುರೋಪಿನಲ್ಲಿ ರಕ್ತಸಿಕ್ತ ಉಗ್ರ ದಾಳಿಗೆ ಸಂಚು ರೂಪಿಸಲು ಸಮರ್ಥರಾಗಿದ್ದಾರೆ ಎಂದು ಆರೋಪಿಸಿದ ಮಾರ್ಟುಸ್ಸಿಲ್ಲೊ, ಇಸ್ಲಾಮಾಬಾದ್ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದರು.

ಇನ್ನು ಯುರೋಪಿಯನ್ ಕಮಿಷನ್ ಉಪಾಧ್ಯಕ್ಷರ ಪರವಾಗಿ ಮಾತನಾಡಿದ ಇಯು ಸಚಿವ ಟೈಟ್ಟಿ ತುಪ್ಪುರೈನೆನ್ ಅವರು,'ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಅವಕಾಶ ನೀಡಬಾರದು. ಭಾರತ-ಪಾಕಿಸ್ತಾನ ಮಾತುಕತೆ ಮೂಲಕ ಕಾಶ್ವೀರ ವಿವಾದವನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

SCROLL FOR NEXT