ವಿದೇಶ

ಖ್ಯಾತ ಬರಹಗಾರ ರಘು ಕಾರ್ನಾಡ್ ಗೆ 'ವಿಂಧಾಮ್ ಕ್ಯಾಂಬೆಲ್' ಅಂತರಾಷ್ಟ್ರೀಯ ಪ್ರಶಸ್ತಿ ಪ್ರಧಾನ

Raghavendra Adiga

ಖ್ಯಾತ ಸಾಹಿತಿ ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ಪುತ್ರ ರಘು ಕಾರ್ನಾಡ್ ಅವರಿಗೆ ಅಮೆರಿಕದ ಯೇಲ್ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ "ವಿಂಧಾಮ್ ಕ್ಯಾಂಬೆಲ್ ಪ್ರಶಸ್ತಿ" ಪ್ರಧಾನ ಮಾಡಲಾಗಿದೆ.

ರಘು ಕಾರ್ನಾಡ್ ಅವರ "Farthest Field: An Indian Story of the Second World War" ಪುಸ್ತಕಕ್ಕಾಗಿ ಈ ಪ್ರಶಸ್ತಿ ಒಲಿದಿದೆ.

ಬಹುಮಾನವನ್ನು ಸ್ವೀಕರಿಸಿದ ನಂತರ, ಕರ್ನಾಡ್ ಮಾತನಾಡಿ ಈ ಪುಸ್ತಕ ಭಾರತದ ಹೊರಗೆ ಇಷ್ಟೊಂದು ಖ್ಯಾತಿಪಡೆಯಲಿದೆ ಎಂದುಕೊಂಡಿರಲಿಲ್ಲ, ಈ ಪುಸ್ತಕವನ್ನು ಗುರುತಿಸಿ ನನಗೆ ಇಂತಹಾ ಪ್ರಶಸ್ತಿ ನೀಡಿರುವುದು ನನ್ನಂತಹ ಇತರರಿಗೆ ಸ್ಪೂರ್ತಿಯಾಗಬಹುದು ಎಂದಿದ್ದಾರೆ.

ಪ್ರಶಸ್ತಿ ವಿಜೇತ ಕೃತಿಯನ್ನು 2016ರಲ್ಲಿ ಹಾರ್ಪರ್ ಕಾಲಿನ್ಸ್ ಪ್ರಕಟಿಸಿದೆ.ಪ್ರತಿಷ್ಠಿತ ಪ್ರಶಸ್ತಿ ಜತೆಗೆ165000 ಅಮೆರಿಕನ್ ಡಾಲರ್ (ಸುಮಾರು ಒಂದೂಕಾಲು ಕೋಟಿ ರು) ನಗದು  ಬಹುಮಾನವಿದೆ. ಇನ್ನು ಯೇಲ್ ವಿವಿ ನ ಕಾರ್ಯಕ್ರಮದಲ್ಲಿ ರಘು ಅವರನ್ನು ಒಳಗೊಂಡು ಒಟ್ಟು ಎಂಟು ಮಂದಿಗೆ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.

SCROLL FOR NEXT