ವಿದೇಶ

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪನ, ರಿಕ್ಟರ್ ಮಾಪಕದಲ್ಲಿ 6.2ರಷ್ಟು ತೀವ್ರತೆ ದಾಖಲು

Srinivasamurthy VN

ಜಕಾರ್ತಾ: ದ್ವೀಪರಾಷ್ಟ್ರ ಇಂಡೋನೇಷ್ಯಾದಲ್ಲಿ ಮತ್ತೆ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.2ರಷ್ಟು ತೀವ್ರತೆ ದಾಖಲಾಗಿದೆ.

ಇಂಡೋನೇಷ್ಯಾ ಕರಾವಳಿಯಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕ ಭೂ ವಿಜ್ಞಾನ ಸಮೀಕ್ಷೆ (ಯುಎಸ್‌ಜಿಎಸ್) ಶನಿವಾರ ವರದಿ ಮಾಡಿದೆ. ಇಲ್ಲಿನ ಸೌಮ್ಲಾಕಿಯ ವಸಾಹತಿನ ವಾಯವ್ಯಕ್ಕೆ 186 ಕಿಲೋಮೀಟರ್ (116 ಮೈಲಿ) ದೂರದಲ್ಲಿ ನೆಲದಡಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ತಿಳಿದುಬಂದಿದೆ.

ಭೂಕಂಪನದ ಕೇಂದ್ರ ಬಿಂದು 48.5 ಕಿಲೋಮೀಟರ್ ಆಳ ದಾಖಲಾಗಿದ್ದು, ಭೂಕಂಪನದಿಂದ ಉಂಟಾದ ಸಾವು ನೋವು ಅಥವಾ ಹಾನಿಯ ಬಗ್ಗೆ ತಕ್ಷಣಕ್ಕೆ ತಿಳಿದುಬಂದಿಲ್ಲ.

ಹೆಚ್ಟಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

SCROLL FOR NEXT