ವಿದೇಶ

ಶೀಘ್ರದಲ್ಲೇ ಭಾರತದೊಂದಿಗೆ ವ್ಯಾಪಾರ ಒಪ್ಪಂದ: ಡೊನಾಲ್ಡ್ ಟ್ರಂಪ್ ಭರವಸೆ

Raghavendra Adiga

ಮೋದಿಯನ್ನು ಭೇಟಿಯಾಗಿ ದ್ವಿಪಕ್ಷೀಯ ಸಹಕಾರ ಚರ್ಚಿಸಿದ ಅಮೆರಿಕಾ ಅಧ್ಯಕ್ಷ

ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಥೆ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿದ್ದು ಇಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದರು.ಈ ವೇಳೆ ಇಬ್ಬರೂ ನಾಯಕರು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಿದ್ದಾರೆ.

ಶೀಘ್ರದಲ್ಲೇ ನಾವು ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತೇವೆ  ಎಂದು ಟ್ರಂಪ್  ಸಭೆಯ ಸಂದರ್ಭದಲ್ಲಿ ಹೇಳಿದರು. ಅದಾಗ ಪ್ರಧಾನಿ ಮೋದಿ "ಟ್ರಂಪ್ ಭಾರತದ ಅತ್ಯುತ್ತಮ ಸ್ನೇಹಿತ" ಎಂದಿದ್ದಾರೆ.

ಹ್ಯೂಸ್ಟನ್ ನಲ್ಲಿ ನಡೆದಿದ್ದ ಹೌದಿ ಮೋದಿ ಮೆಗಾ ಕಾರ್ಯಕ್ರಮದಲ್ಲಿ ಉಭಯ ನಾಯಕರು ಒಟ್ಟಾದ ಎರಡು ದಿನಗಳ ನಂತರ ಈ ಭೇಟಿ ನಡೆದಿದೆ.

ಇನ್ನು ಪಾಕಿಸ್ತಾನ ಹಾಗೂ ಭಾರತ ಕಾಶ್ಮೀರ ವಿಚಾರದಲ್ಲಿ ಬಹಳ ಭಿನ್ನಾಭಿಪ್ರಾಯಗಳನ್ನು ಹೊಂದಿವೆ. ಆ ಎರಡೂ ರಾಷ್ಟ್ರಗಳು ಒಪ್ಪಿಕೊಂಡರೆ ನಾನು ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಗಾರನಾಗಲು ಸಿದ್ದ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.

SCROLL FOR NEXT