ವಿದೇಶ

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವಕ್ಕೆ ಭಾರತ, ಬ್ರೆಜಿಲ್, ಜರ್ಮನಿ, ಜಪಾನ್ ಯತ್ನ

Srinivasamurthy VN

ನ್ಯೂಯಾರ್ಕ್: ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವಕ್ಕೆ ಭಾರತ, ಬ್ರೆಜಿಲ್, ಜರ್ಮನಿ, ಜಪಾನ್ ರಾಷ್ಟ್ರಗಳು ಪ್ರಯತ್ನಿಸಿವೆ. 
   
ಈ ನಾಲ್ಕು ದೇಶಗಳ ಸಚಿವರು ಪರಿಷ್ಕೃತ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವಕ್ಕೆ ಪರಸ್ಪರ ಅಭ್ಯರ್ಥಿಗಳಿಗೆ ಬೆಂಬಲ ನೀಡುವುದಾಗಿ ಹಾಗೂ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಕಾಯ್ದುಕೊಳ್ಳುವ ಹೊಣೆಗಾರಿಗೆ ನಿಭಾಯಿಸುವ ಬದ್ಧತೆ ಪುನರುಚ್ಚರಿಸಿದ್ದಾರೆ ಎಂದ ಜಿ 4 ರಾಷ್ಟ್ರಗಳ ವಿದೇಶಾಂಗ ಸಚಿವರ ಜಂಟಿ ಹೇಳಿಕೆ ತಿಳಿಸಿದೆ. 

ಮಂಡಳಿಯನ್ನು ಇನ್ನಷ್ಟು ಕಾನೂನುಬದ್ಧ, ಪರಿಣಾಮಕಾರಿ ಮತ್ತು ಪ್ರಾತಿನಿಧಿಕಗೊಳಿಸಲು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪಾತ್ರವನ್ನು ವಿಸ್ತರಿಸುವ ಅಗತ್ಯವಿದೆ ಎಂದು ಹೇಳಿಕೆ ತಿಳಿಸಿದೆ. ಶಾಶ್ವತ ಮತ್ತು ಶಾಶ್ವತವಲ್ಲದ ವಿಭಾಗದಲ್ಲಿ ಆಫ್ರಿಕಾದ ಪ್ರಾತಿನಿಧ್ಯಕ್ಕೆ ಸಚಿವರು ತಮ್ಮ ಬೆಂಬಲವನ್ನು ಒತ್ತಿ ಹೇಳಿದ್ದಾರೆ. 

74 ನೇ ವಿಶ್ವಸಂಸ್ಥೆಯ ಮಹಾಧಿವೇಶನದ ನೇಪಥ್ಯದಲ್ಲಿ ನಡೆದ ಈ ಸಭೆಯಲ್ಲಿ ಭಾರತ ವಿದೇಶಾಂಗ ಸಚಿವ ಜೈಶಂಕರ್, ಬ್ರೆಜಿಲ್ ವಿದೇಶಾಂಗ ಸಚಿವ ಎರ್ನೆಸ್ಟೊ, ಜರ್ಮನಿ ಮತ್ತು ಜಪಾನ್ ವಿದೇಶಾಂಗ ಸಚಿವರಾದ ಹೈಕೋ ಮಾಸ್ ಮತ್ತು ತೋಶಿಮಿಸ್ಟು ಮೊಟೆಗಿ ಭಾಗಿಯಾಗಿದ್ದರು. ಈ ಸುಧಾರಣೆ ಕೇವಲ ಶಾಶ್ವತ ಮತ್ತು ಶಾಶ್ವತವಲ್ಲವ ವಿಭಾಗಗಳಲ್ಲಿನ ಸದಸ್ಯತ್ವ ವಿಸ್ತರಣೆ ಮಾತ್ರವಲ್ಲದೇ ಇನ್ನಷ್ಟು ಪಾರದರ್ಶಕ ಮತ್ತು ಪರಿಣಾಮಕಾರಿಯಾಗಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದೆ.

ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ವಿದೇಶಾಂಗ ಸಚಿವರೊಂದಿಗೂ ಡಾ.ಎಸ್.ಜೈಶಂಕರ್ ಮಾತುಕತೆ ನಡೆಸಿದರು. ಶಾಂತಿಯುತ, ಸುಭದ್ರ ಮತ್ತು ಸಮೃದ್ಧ ವಿಶ್ವಕ್ಕಾಗಿ ಸಮಾನ ಉದ್ದೇಶ ಮತ್ತು ಗುರಿಗಳನ್ನು ಈ ನಾಯಕರು ಒತ್ತಿ ಹೇಳಿದ್ದಾರೆ.  ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಅಂತಾರಾಷ್ಟ್ರೀಯ ಆಡಳಿತದಲ್ಲಿ ಜನರು ಒಳಗೊಳ್ಳಬೇಕು. ಜನರ ಅಗತ್ಯಗಳನ್ನು ಪೂರೈಸುವ ಬಹುಪಕ್ಷೀಯ ವ್ಯವಸ್ಥೆ ರೂಪಿಸಲು ಬದ್ಧ ಎಂದು ಸಚಿವರು ತಿಳಿಸಿದ್ದಾರೆ.

SCROLL FOR NEXT