ಸಾಂದರ್ಭಿಕ ಚಿತ್ರ 
ವಿದೇಶ

ವಿಶ್ವದಲ್ಲಿ 15 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಕೊರೋನಾ, 192 ರಾಷ್ಟ್ರಗಳಿಗೆ ವ್ಯಾಪಿಸಿದ ಸೋಂಕು: 87,320ಕ್ಕೂ ಹೆಚ್ಚು ಸಾವು

ವಿಶ್ವಾದ್ಯಂತ 1.5 ಮಿಲಿಯನ್ ಗೂ ಅಧಿಕ ಮಂದಿಗೆ ಕೊರೋನಾ ಸೋಂಕು ತಗುಲಿದ್ದು 87 ಸಾವಿರದ 320 ಮಂದಿ ಮೃತಪಟ್ಟಿದ್ದಾರೆ. 192 ದೇಶಗಳಿಗೆ ಸೋಂಕು ಪಸರಿಸಿದೆ ಎಂದು ಎಎಫ್ ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಪ್ಯಾರಿಸ್: ವಿಶ್ವಾದ್ಯಂತ 1.5 ಮಿಲಿಯನ್ ಗೂ ಅಧಿಕ ಮಂದಿಗೆ ಕೊರೋನಾ ಸೋಂಕು ತಗುಲಿದ್ದು 87 ಸಾವಿರದ 320 ಮಂದಿ ಮೃತಪಟ್ಟಿದ್ದಾರೆ. 192 ದೇಶಗಳಿಗೆ ಸೋಂಕು ಪಸರಿಸಿದೆ ಎಂದು ಎಎಫ್ ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಕಳೆದ ವರ್ಷಾಂತ್ಯದಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಸೋಂಕಿನ ಬಗ್ಗೆ ಎಎಫ್ ಪಿ ಸಂಸ್ಥೆ ರಾಷ್ಟ್ರೀಯ ಪ್ರಾಧಿಕಾರಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯನ್ನಾಧರಿಸಿ ಅಂಕಿಅಂಶಗಳನ್ನು ನೀಡಿದೆ. ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು ಎಂದು ಹೇಳಲಾಗುತ್ತಿದೆ. ಏಕೆಂದರೆ ಬಹುತೇಕ ದೇಶಗಳು ಅತಿ ಗಂಭೀರ ಕೇಸುಗಳನ್ನು ಮಾತ್ರ ಪರೀಕ್ಷೆ ನಡೆಸಿವೆ.

ಅಮೆರಿಕಾದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಇದುವರೆಗೆ 14 ಸಾವಿರದ 817 ಜನರು ಮೃತಪಟ್ಟಿದ್ದು 4 ಲಕ್ಷದ 32 ಸಾವಿರದ 132 ಜನಕ್ಕೆ ತಗುಲಿದೆ. ಸ್ಪೈನ್ ನಲ್ಲಿ 14 ಸಾವಿರದ 555 ಮಂದಿ ಮೃತಪಟ್ಟಿದ್ದು 1 ಲಕ್ಷದ 46 ಸಾವಿರದ 690 ಮಂದಿ ಸೋಂಕಿತರಿದ್ದಾರೆ. ಇಟಲಿ ದೇಶದಲ್ಲಿ 17 ಸಾವಿರದ 669 ಮಂದಿ ಮೃತಪಟ್ಟಿದ್ದು 1 ಲಕ್ಷದ 39 ಸಾವಿರದ 422 ಮಂದಿ ಸೋಂಕಿತರಿದ್ದಾರೆ.

ಕೊರೋನಾ ಸೋಂಕು ಯುರೋಪ್ ಖಂಡದಲ್ಲಿ ಹೆಚ್ಚು ವ್ಯಾಪಿಸಿದೆ. ಇಲ್ಲಿ 7 ಲಕ್ಷದ 72 ಸಾವಿರದ 592 ಜನಕ್ಕೆ ಸೋಂಕು ತಗುಲಿದ್ದು 61 ಸಾವಿರದ 118 ಮಂದಿ ಮೃತಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ಯಾರೆಂಟಿ ಅನರ್ಹ ಫಲಾನುಭವಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ಸಿಎಂ ಡಿ.ಕೆ ಶಿವಕುಮಾರ್ ಸೂಚನೆ

BIDADI TOWNSHIP: 7,481 ರಿಂದ 9,600 ಎಕರೆ ಸ್ವಾಧೀನಕ್ಕೆ ಸಂಚು, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಜೆಡಿಎಸ್ ದೂರು

IPL 2027: ಮರಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಿಷಭ್ ಪಂತ್, ಲಕ್ನೋ ತಂಡಕ್ಕೆ ಕುಲದೀಪ್ ಯಾದವ್ ಸೇರುವ ಸಾಧ್ಯತೆ!

AI ಬಳಸಿ ನಟಿ ರುಕ್ಮಿಣಿ ವಸಂತ್ ಬಿಕಿನಿ ಫೋಟೋ, ವಿಡಿಯೋ ವೈರಲ್​ ಕೇಸ್; ಮೂವರು ಆರೋಪಿಗಳ ಬಂಧನ

ಸೈಬರ್ ವಂಚನೆ ತಡೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ: ಸಂತ್ರಸ್ತರಿಂದ ದೋಚಿದ್ದ 436 ಕೋಟಿ ರೂ freez!