ಸಂಗ್ರಹ ಚಿತ್ರ 
ವಿದೇಶ

ಕೊರೋನಾ ತಡೆಗಟ್ಟಲು ಹೆಣಗುತ್ತಿರುವ ಪಾಕ್ ಗೆ ತಲೆನೋವಾಗಿ ಪರಿಣಮಿಸಿದ ಆದೇಶ ಪಾಲಿಸದ ಮೌಲ್ವಿಗಳು! 

ಪಾಕಿಸ್ತಾನದಲ್ಲಿ ಒಂದೇ ದಿನ 465 ಕೊರೋನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸಂಖ್ಯೆ 7,481ಕ್ಕೆ ಏರಿಕೆಯಾಗಿದೆ. 

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಒಂದೇ ದಿನ 465 ಕೊರೋನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸಂಖ್ಯೆ 7,481ಕ್ಕೆ ಏರಿಕೆಯಾಗಿದೆ. 

ಅಲ್ಲಿನ ಸರ್ಕಾರ ಕೊರೋನಾ ತಡೆಗೆ ಹೆಣಗುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ಆದೇಶಗಳನ್ನು ಪಾಲಿಸದ ಮೌಲ್ವಿಗಳು ತಲೆನೋವಾಗಿ ಪರಿಣಮಿಸಿದ್ದಾರೆ. 

ಮಸೀದಿಗಳಲ್ಲಿ ಧಾರ್ಮಿಕ ಸಭೆಗಳನ್ನು ನಡೆಸದಂತೆ ನಿರಂತರ ಮನವಿಯ ಹೊರತಾಗಿಯೂ ಪಾಕ್ ನ ಮೌಲ್ವಿಗಳು ಅದಕ್ಕೆ ಪಾಲಿಸುವುದಿರಲಿ, ಪರಿಗಣಿಸುತ್ತಲೂ ಇಲ್ಲ. 

ಅಲ್ಲಿನ ರಾಷ್ಟ್ರೀಯ ಆರೋಗ್ಯ ಸೇವೆಗಳ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಏ.17 ರಂದು ಒಂದೇ ದಿನ ಕೊರೋನಾ ಸೋಂಕಿಗೆ 143 ಜನರು ಸಾವನ್ನಪ್ಪಿದ್ದಾರೆ. ಪಂಜಾಬ್ ಪ್ರಾಂತ್ಯದಲ್ಲಿ 3,391 ರೋಗಿಗಳಿದ್ದರೆ, ಸಿಂಧ್ ನಲ್ಲಿ 2,217 ಕೈಬರ್-ಪಖ್ತುಂಕ್ವಾ ದಲ್ಲಿ 1,077 ರೋಗಿಗಳು, ಬಲೂಚಿಸ್ಥಾನದಲ್ಲಿ 335, ಗಿಲ್ಗಿಟ್ ಬಾಲ್ಟಿಸ್ಥಾನದಲ್ಲಿ 250, ಇಸ್ಲಾಮಾಬಾದ್ 163 
ಪ್ರಕರಣಗಳು ವರದಿಯಾಗಿವೆ. 

ಈ ವರೆಗೂ 92,548 ಪರೀಕ್ಷೆಗಳನ್ನು ಮಾಡಲಾಗಿದೆ. ಪಾಕಿಸ್ತಾನದ ಅಧ್ಯಕ್ಷರು ಜಮಾತ್-ಎ-ಇಸ್ಲಾಮಿ ಸಂಘಟನೆಯ ಮುಖ್ಯಸ್ಥ ಸಿರಾಜುಲ್ ಹಕ್, ಜಮೈತ್-ಉಲೇಮಾ-ಎ-ಇಸ್ಲಾಮ್ ನ ಮುಖ್ಯಸ್ಥ ಮೌಲಾನ ಫಜ್ಲೂರ್ ರೆಹ್ಮಾನ್ ಸೇರಿದಂತೆ ಹಲವು ಧಾರ್ಮಿಕ ಸಂಘಟನೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದು, ಸರ್ಕಾರದ ಆದೇಶಗಳನ್ನು ಪಾಲಿಸಿ, ಸಭೆಗಳನ್ನು ನಡೆಸದಂತೆ ಮನವಿ ಮಾಡಿದ್ದಾರೆ. ಆದರೆ ಧಾರ್ಮಿಕ ನಾಯಕರು ಪಾಕಿಸ್ತಾನದ ಸರ್ಕಾರದೊಂದಿಗೆ ನಿರೀಕ್ಷಿತ ರೀತಿಯಲ್ಲಿ ಸಹಕರಿಸದೇ ಇರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

'ಕೆಲವು ಸಚಿವರು ಕೈಗೂ ಸಿಗಲ್ಲ, ಫೋನಿಗೂ ಸಿಗಲ್ಲ: ದೇವಲೋಕದಿಂದ ಬಂದಂತೆ ಆಡ್ತಾರೆ; ಅಂತವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಿ'

'ಅಲ್ಪಸಂಖ್ಯಾತರ ಚಾಂಪಿಯನ್‌ ಎನಿಸಿಕೊಂಡವರ ಡಬಲ್‌ ಗೇಮ್‌: ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನ'

ಗ್ರಾಮೀಣ ಪ್ರದೇಶಗಳಿಗೆ ಅಗ್ಗದ ದರದಲ್ಲಿ ಔಷಧಿ: ಇಂಡಿಯಾ ಪೋಸ್ಟ್‌ ಮೂಲಕ ಜನೌಷಧಿ ಸೇವೆ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ..!

SCROLL FOR NEXT