ವಿಜಯ್ ಮಲ್ಯ 
ವಿದೇಶ

ಮದ್ಯದ ದೊರೆ ವಿಜಯ ಮಲ್ಯ ಮನವಿ ವಜಾ, ಭಾರತಕ್ಕೆ ಗಡಿಪಾರು ಸನ್ನಿಹಿತ

ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ  ವಂಚನೆ ಮಾಡಿ ನಂತರ  ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರ ಮಾಡಬೇಕೆಂಬ ಮನವಿ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಯು.ಕೆ. ಕೋರ್ಟ್ ವಜಾ ಮಾಡಿದ್ದು, ಯಾವುದೇ ಕ್ಷಣ ಗಡಿಪಾರು ಮಾಡುವ ಭೀತಿ ಎದುರಾಗಿದೆ.

ಲಂಡನ್: ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ  ವಂಚನೆ ಮಾಡಿ ನಂತರ  ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರ ಮಾಡಬೇಕೆಂಬ ಮನವಿ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಯು.ಕೆ. ಕೋರ್ಟ್ ವಜಾ ಮಾಡಿದ್ದು, ಯಾವುದೇ ಕ್ಷಣ ಗಡಿಪಾರು ಮಾಡುವ ಭೀತಿ ಎದುರಾಗಿದೆ.

ಭಾರತಕ್ಕೆ ಹಸ್ತಾಂತರ ಮಾಡುವುದನ್ನು ಪ್ರಶ್ನೆ ಮಾಡಿ 2018ರಲ್ಲಿ ಕೋರ್ಟ್ ನೀಡಿದ್ದ ತೀ ಪಿನ ವಿರುದ್ದ  ವಿಜಯ್ ಮಲ್ಯ ಮೇಲ್ಮನವಿ ಸಲ್ಲಿಸಿದ್ದರು.

ಕಿಂಗ್ ಫಿಷರ್ ಏರ್ ಲೈನ್ಸ್ ಗಾಗಿ ಭಾರತದಲ್ಲಿನ ಹಲವು ಬ್ಯಾಂಕ್ ಗಳಿಂದ 9000 ಕೋಟಿ ರುಪಾಯಿ ಸಾಲ ಮಾಡಿದ್ದು, ಅದರ ಜತೆಗೆ ಅಕ್ರಮ ಹಣಕಾಸು ವರ್ಗಾವಣೆ ಮಾಡಿದ  ವಂಚನೆ ಆರೋಪಕ್ಕೆ ಸಂಬಂಧಪಟ್ಟಂತೆ  ವಿಜಯ್ ಮಲ್ಯ ಭಾರತಕ್ಕೆ ಗಡಿಪಾರು ಮಾಡಬೇಕೆಂದು ಭಾರತ ಮನವಿ ಮಾಡಿತ್ತು.

ಯಾವುದೇ ತಪ್ಪು ಮಾಡಿಲ್ಲ. ನಾನು ಹಣ ವಾಪಸ್ ಮಾಡಲು ಸಿದ್ಧ ಎಂದು  ಆದರೆ  ಬ್ಯಾಂಕ್ ಹಣ ಪಡೆಯಲು ಸಿದ್ಧವಿಲ್ಲ  ಎಂದೂ  ಅವರು ಹೇಳಿಕೊಂಡಿದ್ದರು.

ಭಾರತಕ್ಕೆ ಹಸ್ತಾಂತರ ಮಾಡಬೇಕು ಎಂಬ ಮನವಿಯನ್ನು ಪುರಸ್ಕರಿಸಿ, ಲಂಡನ್ ನಲ್ಲಿ 2017 ರಲ್ಲಿ ಲಂಡನ್ ನಲ್ಲಿ ಮಲ್ಯರನ್ನು ಬಂಧಿಸಲಾಗಿತ್ತು. ನಂತರ ಅವರು  ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಗೆ ಬಂದಿದ್ದರು. ಜಾರಿ ನಿರ್ದೇಶನಾಲಯ ಪ್ರಮಾಣ ಪತ್ರ ಸಲ್ಲಿಸಿದ ಮೇಲೆ ಅದೇ ವರ್ಷ ಅಕ್ಟೋಬರ್ ನಲ್ಲಿ ಮತ್ತೊಮ್ಮೆ ಮಲ್ಯರನ್ನು ಬಂಧಿಸಲಾಗಿತ್ತು.ಈಗ ಭಾರತದ ಮನವಿಗೆ ಕೋರ್ಟ್ ಪುರಸ್ಕಾರ  ನೀಡಿದಂತಾಗಿದ್ದು  ಗಡಿಪಾರು ಹಾದಿ ಸುಗಮ ವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ