ವಿದೇಶ

60 ದಿನಗಳ ಭಾಗಶಃ ವಲಸೆ ನಿರ್ಬಂಧಕ್ಕೆ ಸಹಿ ಹಾಕಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಕೊರೋನಾ ವೈರಸ್ ಸೋಂಕಿನ ಸಂಕಷ್ಟ ಸಮಯದಲ್ಲಿ ವಿದೇಶಿಯರು ಬಂದು ಸ್ಥಳೀಯ ದೇಶದ ಪ್ರಜೆಗಳಿಗೆ ಉದ್ಯೋಗಕ್ಕೆ ಆಗುವ ತೊಂದರೆಯನ್ನು ತಪ್ಪಿಸಲು ಅಮೆರಿಕಕ್ಕೆ ವಲಸೆ ಬರುವುದಕ್ಕೆ ಭಾಗಶಃ ರದ್ದುಗೊಳಿಸಲಾಗಿದೆ.

ವಾಷಿಂಗ್ಟನ್: ಕೊರೋನಾ ವೈರಸ್ ಸೋಂಕಿನ ಸಂಕಷ್ಟ ಸಮಯದಲ್ಲಿ ವಿದೇಶಿಯರು ಬಂದು ಸ್ಥಳೀಯ ದೇಶದ ಪ್ರಜೆಗಳಿಗೆ ಉದ್ಯೋಗಕ್ಕೆ ಆಗುವ ತೊಂದರೆಯನ್ನು ತಪ್ಪಿಸಲು ಅಮೆರಿಕಕ್ಕೆ ವಲಸೆ ಬರುವುದಕ್ಕೆ ಭಾಗಶಃ ರದ್ದುಗೊಳಿಸಲಾಗಿದೆ. ಈ ಸಂಬಂಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿನ್ನೆಯಷ್ಟೇ ತಾತ್ಕಾಲಿಕ ವಲಸೆ ನಿರ್ಬಂಧಕ್ಕೆ ಸಹಿ ಹಾಕಿದ್ದಾರೆ.

ನಮ್ಮ ದೇಶದ ಪ್ರಜೆಗಳನ್ನು ರಕ್ಷಿಸಲು ಅಮೆರಿಕಕ್ಕೆ ಉದ್ಯೋಗಕ್ಕೆಂದು ವಲಸೆ ಬರುವವರಿಗೆ ತಾತ್ಕಾಲಿಕ ನಿರ್ಬಂಧ ಹೇರುವ ಕಾರ್ಯಕಾರಿ ಆದೇಶಕ್ಕೆ ನಾನು ಈಗಷ್ಟೇ ಸಹಿ ಹಾಕಿದ್ದೇನೆ. ಇದರಿಂದ ಇನ್ನು ಮುಂದೆ ಯಾವುದೇ ಹಿನ್ನೆಲೆಯುಳ್ಳ ನಿರುದ್ಯೋಗಿ ಅಮೆರಿಕನ್ನರಿಗೆ ಉದ್ಯೋಗಗಳಲ್ಲಿ ಮೊದಲ ಪ್ರಾಶಸ್ತ್ಯ ನೀಡಲಾಗುವುದು, ಇದರಿಂದ ನಮ್ಮ ದೇಶದ ಆರ್ಥಿಕತೆ ಮತ್ತೆ ಮರುಚೇತನಗೊಳ್ಳಲಿದೆ ಎಂದು ನಿನ್ನೆ ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಮೆರಿಕ ಅಧ್ಯಕ್ಷರ ಈ 60 ದಿನಗಳ ತಾತ್ಕಾಲಿಕ ನಿರ್ಬಂಧದಿಂದಾಗಿ ಅಲ್ಲಿನ ಶಾಶ್ವತ ನೆಲೆಗೆ ಅಥವಾ ಗ್ರೀನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಭಾರತ ಸೇರಿದಂತೆ ಬೇರೆ ರಾಷ್ಟ್ರಗಳ ನಾಗರಿಕರಿಗೆ ತೊಂದರೆಯಾಗಲಿದೆ.

ಅಮೆರಿಕದಲ್ಲಿ ಋತುಮಾನಗಳಲ್ಲಿ ಕೃಷಿ ಕಾರ್ಮಿಕ ಕೆಲಸಗಳಿಗೆ ಹೋಗುವ ಕಾರ್ಮಿಕರಿಗೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಆರೋಗ್ಯ ವಲಯಗಳಲ್ಲಿ ಕೆಲಸ ಮಾಡುವ ಮತ್ತು ಅಮೆರಿಕ ಪ್ರಜೆಗಳ ಸಮೀಪ ಬಂಧುಗಳಿಗೆ ಸಹ ಇದರಿಂದ ಯಾವುದೇ ಸಮಸ್ಯೆಯಿಲ್ಲ.

ಇದುವರೆಗೆ 45 ಸಾವಿರ ಸಾವು ಮತ್ತು 8 ಲಕ್ಷದ 25 ಸಾವಿರ ಮಂದಿಗೆ ಕೊರೋನಾ ಸೋಂಕು ವ್ಯಾಪಿಸಿ ಜಗತ್ತಿನಲ್ಲಿಯೇ ಅಮೆರಿಕ ಕೊರೋನಾ ಸೋಂಕಿತರ ಸಾವು-ನೋವಿನಲ್ಲಿ ಮೊದಲ ಸ್ಥಾನದಲ್ಲಿದೆ. ಇದು ದೇಶದ ಎಲ್ಲಾ ವಲಯಗಳ ಮೇಲೆ ತೀವ್ರ ರೀತಿಯಲ್ಲಿ ಪರಿಣಾಮ ಬೀರಿದೆ. ನ್ಯೂಯಾರ್ಕ್ ನಲ್ಲಿ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video