ವಿದೇಶ

ಶಾಂತಿ ನೆಲೆಸಬೇಕು, ಪ್ರಚೋದನಾಕಾರಿ ಕೃತ್ಯ ನಿಲ್ಲಿಸಿ: ಭಾರತಕ್ಕೆ ಚೀನಾ ಒತ್ತಾಯ!

Vishwanath S

ನವದೆಹಲಿ: ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಉಭಯ ತಂಡಗಳ ನಡುವೆ ಘರ್ಷಣೆ ಸಂಭವಿಸಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದು "ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಿ. ಅನುಮಾನಕ್ಕಿಂತ ನಂಬಿಕೆಯನ್ನು ಬೆಳೆಸುವ ಅಗತ್ಯವಿದೆ ಎಂದು ಭಾರತವನ್ನು ಚೀನಾ ಒತ್ತಾಯಿಸಿದೆ. 

"ಸಮಗ್ರ ತನಿಖೆ ನಡೆಯಬೇಕು, ನಿಯಮ ಉಲ್ಲಂಘಿಸಿದವರನ್ನು ಹೊಣೆಗಾರರನ್ನಾಗಿ ಮಾಡಬೇಕು, ಮುಂಚೂಣಿ ಸೈನಿಕರನ್ನು ಕಟ್ಟುನಿಟ್ಟಾಗಿ ಶಿಸ್ತುಬದ್ಧಗೊಳಿಸಬೇಕು. ಆಗ ಅಂತಹ ಘಟನೆಗಳು ಮತ್ತೆ ಸಂಭವಿಸುವುದಿಲ್ಲ. ಇನ್ನು ಎಲ್ಲಾ ರೀತಿಯ ಪ್ರಚೋದನಕಾರಿ ಕೃತ್ಯಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಭಾರತದ ಚೀನಾದ ರಾಯಭಾರಿ ಸನ್ ವೀಡಾಂಗ್ ಹೇಳಿರುವುದನ್ನು ಚೀನೀ ರಾಯಭಾರ ಕಚೇರಿ  'ಚೀನಾ-ಇಂಡಿಯಾ ರಿವ್ಯೂ' ಎಂಬ ನಿಯತಕಾಲಿಕಯಲ್ಲಿ ಪ್ರಕಟಿಸಿದೆ.

ಏರಿಳಿತಗಳಿರದ ಸಂಬಂಧಗಳು ಇರುವುದಿಲ್ಲ. ಚೀನಾ-ಭಾರತ ಸಂಬಂಧಗಳು "ಹಿಂದುಳಿದವರಿಗಿಂತ ಮುಂದೆ" ಸಾಗಬೇಕು ಎಂದು ಸನ್ ವೀಡಾಂಗ್ ಹೇಳಿದರು. ಚೀನಾ ಮತ್ತು ಭಾರತದ ನಡುವಿನ ಇತ್ತೀಚಿನ ಗಡಿ ಸಮಸ್ಯೆ ದುರದೃಷ್ಟಕರ ಘಟನೆ ನಮ್ಮ ಇಬ್ಬರು ನಾಯಕರಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಪಟ್ಟಿ ಮಾಡಿದ ದ್ವಿಪಕ್ಷೀಯ ಸಹಭಾಗಿತ್ವ ಮುಂದುವರೆಯಬೇಕು ಎಂದರು. 

ಉಭಯ ದೇಶಗಳು ಮುಖಾಮುಖಿಯಾಗುವುದಕ್ಕಿಂತ  ಶಾಂತಿ ನೆಲೆಸಬೇಕು. ನಾವು ಪರಸ್ಪರ ಪ್ರಮುಖ ಹಿತಾಸಕ್ತಿಗಳನ್ನು ಮತ್ತು ಪ್ರಮುಖ ಕಾಳಜಿಗಳನ್ನು ಗೌರವಿಸಬೇಕು. ಪರಸ್ಪರರ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವ ತತ್ವವನ್ನು ಅನುಸರಿಸಬೇಕು ಎಂದು ಸನ್ ಹೇಳಿದ್ದಾರೆ.

SCROLL FOR NEXT