ವಿದೇಶ

ಸಂಸತ್ ವಿಸರ್ಜಿಸಲು ನೇಪಾಳ ಸಂಪುಟ ಶಿಫಾರಸು: ರಾಷ್ಟ್ರಪತಿಗಳ ಅನುಮೋದನೆ, ಏಪ್ರಿಲ್ 30, ಮೇ 10ರಂದು ಚುನಾವಣೆ

Srinivasamurthy VN

ಕಠ್ಮಂಡು: ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ನೇಪಾಳ ಸಂಸತ್ತನ್ನು ವಿಸರ್ಜಿಸುವ ಪ್ರಧಾನಿ ಕೆರಿ ಶರ್ಮಾ ಒಲಿ ನೇತೃತ್ವ ಸಂಪುಟ ಸಭೆಯ ಶಿಫಾರಸ್ಸಿಗೆ ನೇಪಾಳ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ.

ಭಾನುವಾರ ನಡೆದ ತುರ್ತು ಸಭೆಯಲ್ಲಿ ಸಂಸತ್ ವಿಸರ್ಜಿಸಲು ನೇಪಾಳದ ಕ್ಯಾಬಿನೆಟ್ ಶಿಫಾರಸು ಮಾಡಿತ್ತು. ಅಲ್ಲದೆ ಶಿಫಾರಸ್ಸಿಗೆ ನೇಪಾಳದ ರಾಷ್ಟ್ರಪತಿಗಳಾದ ಬಿದ್ಯಾ ದೇವಿ ಭಂಡಾರಿ ಅವರು ಅನುಮೋದನೆ ನೀಡಿದ್ದಾರೆ. ಅಲ್ಲದೆ ಮುಂದಿನ ವರ್ಷದ ಏಪ್ರಿಲ್ 30 ಮತ್ತು ಮೇ10ರಂದು  ನೇಪಾಳದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಘೋಷಣೆ ಮಾಡಿದ್ದಾರೆ.

ಇಂದು ತುರ್ತು ಸಂಪುಟ ಸಭೆಯಲ್ಲಿ ಸಂಸತ್ತನ್ನು ವಿಸರ್ಜಿಸಲು ರಾಷ್ಟ್ರಪತಿಗೆ ಶಿಫಾರಸು ಮಾಡಲು ನಿರ್ಧರಿಸಿದೆ ಎಂದು ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರ ಸಂಪುಟದಲ್ಲಿ ಇಂಧನ ಸಚಿವರಾಗಿರುವ ಬರ್ಸಮನ್ ಪುನ್ ಮಾಧ್ಯಮಗಳಿಗೆ ತಿಳಿಸಿದರು. 

ವಿವಾದಾತ್ಮಕ ಆರ್ಡಿನೆನ್ಸ್ ಹಿಂತೆಗೆದುಕೊಳ್ಳುವಂತೆ ಆಡಳಿತರೂಢ ನೇಪಾಳ ಕಮ್ಯೂನಿಸ್ಟ್ ಪಕ್ಷದಲ್ಲಿ (ಎನ್‌ಸಿಪಿ) ತಮ್ಮ ವಿರೋಧಿಗಳ ಒತ್ತಡಕ್ಕೆ ಒಳಗಾಗಿದ್ದ ಪ್ರಧಾನಿ ಕೆ.ಪಿ. ಶರ್ಮಾ ಒಲಿ, ಸಂಸತ್ತನ್ನು ವಿಸರ್ಜಿಸಲು ಶಿಫಾರಸು ಮಾಡಿತ್ತು. ಪ್ರಧಾನಿ ಒಲಿ ಮಂಗಳವಾರ ಹೊರಡಿಸಿದ  ಸಾಂವಿಧಾನಿಕ ಮಂಡಳಿ ಕಾಯ್ದೆಯೊಂದಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆಯನ್ನು ಹಿಂಪಡೆಯುವ ಒತ್ತಡದಲ್ಲಿದ್ದರು. ಇದನ್ನು ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಒಂದು ಗಂಟೆಯೊಳಗೆ ಅಂಗೀಕರಿಸಿದ್ದರು. ಕೇವಲ ಮೂರು ಸದಸ್ಯರ ಹಾಜರಾತಿಯಲ್ಲಿ ಸಭೆಗಳನ್ನು ಕರೆಯುವ ಹಾಗೂ  ನಿರ್ಣಯಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಈ ಕಾಯ್ದೆಯು ನೀಡುತ್ತದೆ. 

ಇದು ನೇಪಾಳದ ರಾಜಕೀಯ ಮೇಲಾಟಕ್ಕೆ ಕಾರಣವಾಗಿತ್ತು.

SCROLL FOR NEXT