ವಿದೇಶ

ಯೂರೋಪ್ ನ 8 ದೇಶಗಳಲ್ಲಿ ಕೊರೋನಾ ವೈರಸ್‍ನ ಹೊಸ ರೂಪಾಂತರ ಪತ್ತೆ: ವಿಶ್ವ ಆರೋಗ್ಯ ಸಂಸ್ಥೆ

Nagaraja AB

ಜುರಿಚ್‍: ಯೂರೋಪ್‍ನ 8 ದೇಶಗಳಲ್ಲಿ ಕೊರೋನಾ ವೈರಸ್‍ನ ಹೊಸ ರೂಪಾಂತರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಕ್ಷಣಾತ್ಮಕ ಕ್ರಮಗಳನ್ನು ಹೆಚ್ಚಿಸಬೇಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯೂರೋಪ್‍ನ ಪ್ರಾದೇಶಿಕ ನಿರ್ದೇಶಕರು ಹೇಳಿದ್ದಾರೆ.  

ಯೂರೋಪ್‍ ಪ್ರಾಂತ್ಯದ 8 ದೇಶಗಳಲ್ಲಿ ಇದೀಗ ಹೊಸ ಕೋವಿಡ್‍-19 ರೂಪಾಂತರ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅಸ್ತಿತ್ವದಲ್ಲಿರುವ ರಕ್ಷಣಾತ್ಮಕ ಕ್ರಮಗಳನ್ನು ಬಲಪಡಿಸುವುದು ಬಹಳ ಮುಖ್ಯವಾಗಿದೆ. ವ್ಯಕ್ತಿಗತ ಅಂತರ, ಮುಖಗವಸು ಧರಿಸುವುದು ಮತ್ತಿತರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ ಎಂದು  ಸಲಹೆ ನೀಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದು, ನವೀಕೃತ ಮಾಹಿತಿಯನ್ನು ಒದಗಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯೂರೋಪ್‍ನ ಪ್ರಾದೇಶಿಕ ನಿರ್ದೇಶಕ  ಹ್ಯಾನ್ಸ್ ಕ್ಲುಗೆ ಶುಕ್ರವಾರ ಟ್ವೀಟ್‍ ಮಾಡಿದ್ದಾರೆ.

ಈ ರೂಪಾಂತರವು ಹಿಂದಿನ ತಳಿಗಳಿಗಿಂತ ಭಿನ್ನವಾಗಿ ಕಿರಿಯ ವಯಸ್ಸಿನವರಲ್ಲಿ ಹರಡುತ್ತಿದೆ. ಅದರ ಪ್ರಭಾವವನ್ನು ತಿಳಿಯಲು ಸಂಶೋಧನೆ ನಡೆಯುತ್ತಿರುವಾಗ ಜಾಗರೂಕತೆ ಮುಖ್ಯವಾಗಿದೆ  ಎಂದು ಕ್ಲುಗೆ ನಂತರದ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಕಳೆದ ವಾರ, ಬ್ರಿಟನ್ ನಲ್ಲಿ  ಕೊರೋನಾವೈರಸ್  ಹೊಸ ರೂಪಾಂತರವನ್ನು ಮೊದಲು ಕಂಡುಹಿಡಿಯಲಾಯಿತು. ತಜ್ಞರ ಪ್ರಕಾರ, ಈ ರೀತಿಯ ಸೋಂಕು ಇತರ ಸಾರ್ಸ್- ಕೋವ್-2  ರೂಪಾಂತರಗಳಿಗಿಂತ ಹೆಚ್ಚು ಹರಡುತ್ತದೆ. ಹೊಸ ರೂಪಾಂತರದ ನಂತರ, ಹಲವಾರು ದೇಶಗಳು ಹೊಸದಾಗಿ ಪ್ರಯಾಣ ನಿರ್ಬಂಧಗಳನ್ನು ಪರಿಚಯಿಸಿವೆ.

SCROLL FOR NEXT